Urdu   /   English   /   Nawayathi

ಪುಣೆ ಸಮೀಪ ತರಬೇತಿ ವಿಮಾನ ಪತನ; ಪೈಲಟ್‌ಗೆ ಕೈಮೂಳೆ ಮುರಿತ

share with us

ಮಹಾರಾಷ್ಟ್ರ: 05 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಕಾರ್ವರ್‌ ಏವಿಯೇಶನ್‌ ಇನ್‌ಸ್ಟಿಟ್ಯೂಟ್‌ ನ ತರಬೇತಿ ವಿಮಾನವೊಂದು ಇಂದು ಮಂಗಳವಾರ ಪುಣೆಯ ಇಂದಾಪುರ ಸಮೀಪ ಪತನಗೊಂಡ ದುರಂತದಲ್ಲಿ ಪೈಲಟ್‌ ಗಾಯಗೊಂಡು ಒಡನೆಯೇ ಬಾರಾಮತಿ  ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಗಾಯಗೊಂಡ ಪೈಲಟ್‌ ನನ್ನು ಸಿದ್ಧಾರ್ಥ ಎಂದು ಗುರುತಿಸಲಾಗಿದ್ದು ಆತನ  ಕೈಮೂಳೆ ಮುರಿದಿದೆ.ಈ ವಿಮಾನಾಪಘಾತ ಇಂದು ಮಧ್ಯಾಹ್ನ 12.30ರ ಹೊತ್ತಿಗೆ ವಿಮಾನ ಟೇಕಾಫ್ ಆದ ಸ್ವಲ್ಪವೇ ಹೊತ್ತಿನಲ್ಲೇ ನಡೆದಿದೆ. ವಿಮಾನ ಪತನವಾಗುತ್ತಿರುವುದನ್ನು ಕಾಣುತ್ತಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರ ಪೈಲಟ್‌ ನನ್ನು ರಕ್ಷಿಸುವಲ್ಲಿ ನೆರವಾದರು. ಕಾರ್ವರ್‌ ಏವಿಯೇಶನ್‌ ವಿಮಾನ ಚಾಲನಾ ತರಬೇತಿ ಸಂಸ್ಥೆಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಆದರೆ ಘಟನೆಯ ಬಗ್ಗೆ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಹಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا