Urdu   /   English   /   Nawayathi

ದಿನೇ ದಿನೇ ಹೆಚ್ಚಾಗುತ್ತಿರುವ ನಾಯಿಗಳ ಹಾವಳಿ

share with us

ಭಟ್ಕಳ: 02 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಇಂದು ಬೆಳಿಗ್ಗೆ ಸುಮಾರು 9:30ಕ್ಕೆ ಮೂಸಾ ನಗರದ ನಿವಾಸಿಗಳಾದ ಮೌಲಾನಾ ಅಬ್ದುಲ್ ಸಮದ್ ಖಾಝಿ ಅವರು ತಮ್ಮ ಮನೆಯಿಂದ ಹೊರಟ ವೇಳೆ ಬೀದಿ ನಾಯಿಯೊಂದು ಖಾಝಿಯವರ ಮೇಲೆ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ಇವರನ್ನು ಕಂಡ ಸ್ಥಳೀಯರಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಕಾರ್ಯದರ್ಶಿ ಹಾಗೂ ಇತರರು ನಾಯಿ ದಾಳಿಯಿಂದ ಇವರನ್ನು ರಕ್ಷಿಸಿ ತಕ್ಷಣ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಖಾಝಿಯವರ ಕೈ ಹಾಗೂ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಪರಿಣಾಮ ಚುಚ್ಚುಮದ್ದಿನೊಂದಿಗೆ ಖಾಝಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ನಿನ್ನೆ ಶುಕ್ರವಾರದಂದು ನಾಯಿಗಳ ಗುಂಪೊಂದು ಸೇರಿ ಕುರಿ ಮರಿಯ ಮೇಲೆ ಬೇಟೆ ಆಡಿ ಕುರಿಯನ್ನು ಕೊಂದಿದ್ದು, ಕೆಲವು ದಿನಗಳ ಹಿಂದೆ ಬೀದಿ ನಾಯಿಗಳ ಗುಂಪೊಂದು ಶಾಲೆಗೆ ಹೋಗಲು ನಿಂತಿದ್ದ ಮಕ್ಕಳ ಮೇಲೆ ದಾಳಿ ನಡೆಸಲು ಮುಂದಾದ ವೇಳೆ ಸ್ಥಳೀಯರ ನೆರವಿನಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದರು. ರಾತ್ರಿಯ ಹೊತ್ತು ನಾಯಿಗಳ ಗುಂಪುಗಳನ್ನು ನೋಡಿ ಸಾರ್ವಜನಿಕರು ಭಯಭೀತರಾಗುತ್ತಿದ್ದರು. ಆದರೆ ಇಂದು ಹಗಲಿನಲ್ಲೇ ನಡೆದ ದಾಳಿಯಿಂದ ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ತಾಲೂಕಿನಲ್ಲಿ ದಿನೇ ದಿನೇ ಇಂತಹ ಪ್ರಕರಣಗಳು ಮುಂದುವರೆಯುತ್ತಿದ್ದು ಬೆಳಗಿನ ಹೊತ್ತಿನಲ್ಲಿ ಮಕ್ಕಳು ಶಾಲೆಗೆ ಹೋಗಲು ರಸ್ತೆಯಲ್ಲಿ ನಿಲ್ಲಲು ಹೆದರುತ್ತಿದ್ದು, ಕೂಡಲೇ ಬೀದಿ ನಾಯಿಗಳಿಗೆ ಹಾವಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಪುರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا