Urdu   /   English   /   Nawayathi

ಚೆನ್ನೈ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗಿನಲ್ಲಿ ಚಿರತೆ ಮರಿ ಪತ್ತೆ!

share with us

ಚೆನ್ನೈ: 02 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಕ್ರಮವಾಗಿ ವಿದೇಶಕ್ಕೆ ಸಾಗಿಸಲಾಗುತ್ತಿದ್ದ ಒಂದು ತಿಂಗಳ ಚಿರತೆ ಮರಿಯನ್ನು ಕಸ್ಟಮ್ ಅಧಿಕಾರಿಗಳು ಇಂದು ರಕ್ಷಣೆ ಮಾಡಿದ್ದಾರೆ. ಪ್ರಯಾಣಿಕರ ಬ್ಯಾಗಿನಲ್ಲಿಟ್ಟು ಈ ಚಿರತೆ ಮರಿಯನ್ನು ಚೆನ್ನೈ ವಿಮಾನ ನಿಲ್ದಾಣದಿಂದ ಥೈಲ್ಯಾಂಡ್ ಗೆ ಅಕ್ರಮವಾಗಿ ಸಾಗಿಸಲಾಗುತಿತ್ತು. ಬ್ಯಾಗ್ ನಿಂದ ಶಬ್ದ ಬರುತ್ತಿದುದ್ದನ್ನು ಗಮನಿಸಿದ ಏರ್ ಪೋರ್ಟ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿರತೆ ಮರಿ ಪತ್ತೆಯಾಗಿದೆ. ನಂತರ ಆ ಚಿರತೆ ಮರಿಯನ್ನು ರಕ್ಷಿಸಿ ಅರಿಂಗಾರ್ ನ ಪ್ರಾಣಿ ಸಂಗ್ರಹಾಲಯಕ್ಕೆ  ಕರೆದೊಯ್ಯಲಾಗಿದೆ. ಚಿರತೆ ಮರಿಯನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ತಮಿಳುನಾಡು ಅರಣ್ಯ ಇಲಾಖೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا