Urdu   /   English   /   Nawayathi

ಮಂಗಳೂರು-ಬೆಂಗಳೂರು ನಡುವೆ ಇನ್ನೊಂದು ರೈಲು ಸಂಚಾರ ಶೀಘ್ರ

share with us

ಬೆಂಗಳೂರು: 31 ಜನುವರಿ (ಫಿಕ್ರೋಖಬರ್ ಸುದ್ದಿ) ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆಗೆ ನೈಋತ್ಯ ರೈಲ್ವೆ ಸ್ಪಂದಿಸಿದೆ. ಮಂಗಳೂರು-ಬೆಂಗಳೂರು ನಡುವೆ ಇನ್ನೊಂದು ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮತಿಸಿದೆ. ರಾತ್ರಿ ವೇಳೆ ಸಂಚರಿಲಿರುವ ಈ ರೈಲು ಇನ್ನು ಕೆಲವೇ ದಿನಗಳಲ್ಲಿ ಸಂಚಾರ ಪ್ರಾರಂಭಿಸುವ ನಿರೀಕ್ಷೆ ಇದೆ. ವಾರದಲ್ಲಿ ಮೂರು ದಿನ ರಾತ್ರಿ ಸಂಚಾರ ನಡೆಸುವ ಈ ರೈಲು ಸ್ತಾವನೆ ಹಂತದಲ್ಲಿದ್ದು, ಫೆ.20ರ ನಂತರ ಯಾವುದೇ ದಿನದಂದು ಕಾರ್ಯಾಚರಣೆಗೆ ಇಳಿಯಬಹುದು. 

ವೇಳಾಪಟ್ಟಿ

ಹೊಸ ರೈಲು ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ಸಂಜೆ 4.30ಕ್ಕೆ ಯಶವಂತಪುರದಿಂದ ಹೊರಟು ಶನಿವಾರ, ಸೋಮವಾರ ಹಾಗೂ ಬುಧವಾ ಬೆಳಗಿನ ಜಾವ 4ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಶನಿವಾರ, ಸೋಮವಾರ ಹಾಗೂ ಬುಧವಾರ ಸಂಜೆ 7ಕ್ಕೆ ಬಿಡುವ ರೈಲು ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಳಗಿನ 4.30ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. ಈ ರೈಲಿನ ಕಾರಣ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಸುತ್ತಮುತ್ತಲಿನ ಪ್ರಯಾಣಿಕರಿಗೆ ಸಾಕಷ್ತು ಅನುಕೂಲವಾಗಲಿದೆ. ಅಲ್ಲದೆ ರೈಲು ಮುಂಜಾನೆ ಬೇಗನೇ ಬೆಂಗಳೂರು ತಲುಪುವ ಕಾರಣ ಮರುದಿನ ಕೆಲಸಗಳೀಗೆ ಹೋಗಲು ಸಹ ಸಹಾಯವಾಗಲಿದೆ. ಸದ್ಯ ಈ ಮಾರ್ಗದಲ್ಲಿ ಸಂಚರಿಸುವ ರೈಲು ರಾತ್ರಿ 8.55ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ  7.30ಕ್ಕೆ ಬೆಂಗಳುರು ತಲುಪುತ್ತದೆ. ಅಲ್ಲದೆ ಭಾನುವಾರ ಹೊರತು ಎಲ್ಲಾ ದಿನಗಳಲ್ಲಿ ನಗರ ಜಂಕ್ಷನ್ ನಿಲ್ದಾಣದಿಂದ ಹೊರಡುವ ಗೋಮಟೆಶ್ವರ ಎಕ್ಸ್ ಪ್ರೆಸ್ ರೈಲು ಳಗ್ಗೆ 11.30 ಕ್ಕೆ ಹೊರಟು ಬೆಂಗಳೂರಿಗೆ ರಾತ್ರಿ 8.30 ಕ್ಕೆ ತಲುಪುತ್ತದೆ. ಈ ರೈಲು ಶ್ರವಣಬೆಳಗೊಳ ಮೂಲಕ ಸಂಚರಿಸುತ್ತದೆ..

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا