Urdu   /   English   /   Nawayathi

ರಾಹುಲ್ ಗಾಂಧಿಯನ್ನು ಮುಸಲೋನಿಗೆ ಹೋಲಿಸಿದ ಬಿಜೆಪಿ,ನಿರುದ್ಯೋಗ ಟೀಕೆಗೆ ಸಮರ್ಥನೆ

share with us

ನವದೆಹಲಿ: 31 ಜನುವರಿ (ಫಿಕ್ರೋಖಬರ್ ಸುದ್ದಿ) ಇಪಿಎಫ್ ಒ ಪ್ರಕಾರ , ಕಳೆದ 15 ತಿಂಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ತೀವ್ರ ಹೆಚ್ಚಳವಾಗಿದೆ. ಕೆಲಸದ ವಿಲ್ಲದ ಒಬ್ಬನೇ ವ್ಯಕ್ತಿ ಮಾತ್ರ  ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಬಿಜೆಪಿ  ಆರೋಪಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸರ್ವಾಧಿಕಾರಿ ಮುಸಲೋನಿಗೆ ಹೋಲಿಸಿದೆ. ದೇಶದ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತಿ ಹೆಚ್ಚಾಗಿರುವ ಬಗ್ಗೆ ಟ್ವೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ಯೂರ್  ( ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್  ಹಿಟ್ಲರ್ ಎಂಬ ಅರ್ಥ ಕೊಡುವ ) ಶಬ್ದ ಬಳಸಿದ್ದಕ್ಕೆ ಬಿಜೆಪಿ  ಆಕ್ಷೇಪ ವ್ಯಕ್ತಪಡಿಸಿದೆ. ನೊ ಮೊ ಜಾಬ್ಸ್  ಅಡಿ ಬರಹದಲ್ಲಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ,ಐದು ವರ್ಷಗಳಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಉದ್ಯೋಗಿ ಸೃಷ್ಟಿ ಮಾಹಿತಿ ವರದಿ ಸೋರಿಕೆ  ರಾಷ್ಟ್ರೀಯ ವಿಪತ್ತು ಆಗಿದೆ. ದೇಶದಲ್ಲಿನ 45 ವರ್ಷಗಳಲ್ಲಿಯೇ ಕಂಡಿರದ ನಿರುದ್ಯೋಗ ಸ್ಥಿತಿ ಪರಿಸ್ಥಿತಿ ಇದೆ. 2017-18 ಒಂದರಲ್ಲಿಯೇ  6.5 ಕೋಟಿ ಯುವಜನರು ಉದ್ಯೋಗ ಇಲ್ಲದಂತಾಗಿದೆ ಎಂದು ಆರೋಪಿಸಿದ್ದರು.

View image on TwitterView image on TwitterView image on Twitter

Rahul Gandhi✔@RahulGandhi

NoMo Jobs!

The Fuhrer promised us 2 Cr jobs a year. 5 years later, his leaked job creation report card reveals a National Disaster.

Unemployment is at its highest in 45 yrs.

6.5 Cr youth are jobless in 2017-18 alone.

Time for NoMo2Go.

12.5K

2:04 PM - Jan 31, 2019

8,043 people are talking about this

Twitter Ads info and privacy

ಮತ್ತೊಂದು ಟ್ವೀಟ್ ನಲ್ಲಿ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ  ಪಿಎಲ್ ಎಫ್ ಎಫ್ ಸರ್ವೇ ಪ್ರಕಾರ ಭಾರತದಲ್ಲಿ 45 ವರ್ಷಗಳಲ್ಲಿಯೇ ಅತಿ ಹೆಚ್ಚಿನ ದರದಲ್ಲಿ ನಿರುದ್ಯೋಗ ಪರಿಸ್ಥಿತಿಯಿದ್ದು, 2017-18ರಲ್ಲಿ ಶೇ, 6.1 ರಷ್ಟು ಹೆಚ್ಚಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا