Urdu   /   English   /   Nawayathi

ಅಮೆರಿಕ; ಕಾನೂನು ಬಾಹಿರ ವಾಸ್ತವ್ಯ,600 ಭಾರತೀಯ ವಿದ್ಯಾರ್ಥಿಗಳ ಸೆರೆ

share with us

ವಾಷಿಂಗ್ಟನ್: 31 ಜನುವರಿ (ಫಿಕ್ರೋಖಬರ್ ಸುದ್ದಿ) ವಲಸೆ ಕಾಯ್ದೆಯನ್ನು ಉಲ್ಲಂಘಿಸಿ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸಿದ್ದ ಸುಮಾರು 600 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಅಮೆರಿಕನ್ ತೆಲುಗು ಅಸೋಸಿಯೇಶನ್ ಮಾಹಿತಿ ಪ್ರಕಾರ, ಅಮೆರಿಕದ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ ಫೋರ್ಸ್ ಮೆಂಟ್ ಏಜೆನ್ಸಿ ಜಂಟಿ ದಾಳಿಯಲ್ಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದೆ. ಸಮರ್ಪಕ ದಾಖಲೆ ಹೊಂದಿಲ್ಲದೆ ದೇಶದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ವಿದ್ಯಾರ್ಥಿಗಳನ್ನು(ಬಹುತೇಕರು ಆಂಧ್ರಪ್ರದೇಶದವರು) ಅಮೆರಿಕದ ಇಮಿಗ್ರೇಷನ್ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿರುವುದಾಗಿ ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಫೇಸ್ ಬುಕ್ ಪೋಸ್ಟ್ ನಲ್ಲಿ ವಿವರಿಸಿದೆ.  ಫಾರ್ಮಿಗ್ಟಂನ್ ಹಿಲ್ಸ್ ಪ್ರದೇಶದಲ್ಲಿ ನಕಲಿ ಯೂನಿರ್ವಸಿಟಿಯನ್ನು ಸ್ಥಾಪಿಸಿ ವಿದೇಶಿ(ಭಾರತೀಯ) ವಿದ್ಯಾರ್ಥಿಗಳು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸ್ತವ್ಯ ಹೂಡುವಂತೆ ಮಾಡಿದೆ ಎಂದು ಆರೋಪಿಸಿದೆ. ಏತನ್ಮಧ್ಯೆ ಈ ಯೂನಿರ್ವಸಿಟಿ ನಕಲಿಯಲ್ಲ, ಅಮೆರಿಕದ ಕಾನೂನು ಪ್ರಕಾರವೇ ಸ್ಥಾಪನೆಗೊಂಡಿದೆ ಎಂದು ಅಮೆರಿಕದಲ್ಲಿರುವ ತೆಲುಗು ಅಸೋಸಿಯೇಶನ್ ಪ್ರತಿಕ್ರಿಯೆ ನೀಡಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا