Urdu   /   English   /   Nawayathi

'ಡಿಎಚ್​ಎಫ್​ಎಲ್​'ನಲ್ಲಿ 31,000 ಕೋಟಿ ಅವ್ಯವಹಾರ: ಕರ್ನಾಟಕ, ಗುಜರಾತ್​ ಚುನಾವಣೆಗೆ ಹಣ ಬಳಕೆ?

share with us

ನವದೆಹಲಿ: 30 ಜನುವರಿ (ಫಿಕ್ರೋಖಬರ್ ಸುದ್ದಿ) ದೇಶದ ಪ್ರತಿಷ್ಠಿತ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ದಿವಾನ್ ಹೌಸಿಂಗ್ ಫೈನಾನ್ಸ್​ ಲಿಮಿಟೆಡ್​ನಲ್ಲಿ 31 ಸಾವಿರ ಕೋಟಿ ಅಧಿಕ ಅಕ್ರಮ ಅವ್ಯವಹಾರ ನಡೆದಿದೆ ಎಂದು ಕೋಬ್ರಾಪೋಸ್ಟ್​ ತನಿಖಾ ವೆಬ್​ಸೈಟ್ ಆಪಾದಿಸಿದೆ. ಡಿಎಚ್​ಎಫ್ಎಲ್​ ಹಾಗೂ ಸಹವರ್ತಿ ಕಂಪನಿಗಳು ವ್ಯವಸ್ಥಿತ ಅವ್ಯವಹಾರದಲ್ಲಿ ಪಾಲ್ಗೊಂಡಿವೆ. ಡಿಎಚ್​ಎಫ್​ನಲ್ಲಿನ ಸುಮಾರು ₹ 21 ಸಾವಿರ ಕೋಟಿ ನಕಲಿ ಕಂಪನಿಗಳ ಹೆಸರಿಗೆ ವರ್ಗಾಯಿಸಲಾಗಿದೆ. ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯಕ್ಕೆ ಯಾವುದೇ ಘೋಷಣೆ ಮಾಡದೆ ಕೆಲವು ಕಂಪನಿಗಳಿಗೆ ಸಾಲ ಹಾಗೂ ಹೂಡಿಕೆ ರೂಪದಲ್ಲಿ ಹಣ ವರ್ಗಾವಣೆ ಮಾಡಿದೆ. ಈ ನೆಪದಲ್ಲಿ ಅಕ್ರಮ ಹಣವನ್ನು ಕರ್ನಾಟಕ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳ ಕೆಲವು ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆಪಾದಿಸಿದೆ. ಕರ್ನಾಟಕ ಮತ್ತು ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಇಲ್ಲಿನ ನಕಲಿ ಕಂಫನಿಗಳಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡಲಾಗಿದೆ. ಗುಜರಾತ್​ನಲ್ಲಿ ನಾನಾ ಕಂಪನಿಗಳಿಗೆ ₹ 1,160 ಕೋಟಿ ಸಾಲ ವಿತರಿಸಲಾಗಿದೆ. ಅದೆ ರೀತಿ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮೊದಲು ಇಲ್ಲಿನ ಕಂಪನಿಗಳು ₹ 1,320 ಕೋಟಿ ಸ್ವೀಕರಿಸಿವೆ. ಡಿಎಚ್‌ಎಫ್‌ಎಲ್‌ ಸಾಲ ವಿತರಿಸಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ ಎಂದು ವರದಿ ಮಾಡಿದೆ.

ಆರ್​ಕೆಡಬ್ಲ್ಯೂ ಡೆವಲಪರ್ಸ್​ ಲಿಮಿಟೆಡ್​, ಸ್ಕಿಲ್ ರಿಯಾಲ್ಟರ್ಸ್​ ಲಿಮಿಟೆಡ್​ ಮತ್ತು ದರ್ಶನ್ ಡೆವಲಪರ್ಸ್​ ಪ್ರೈವೇಟ್​ ಸೇರಿದಂತೆ ವಾಧ್ವಾನ್​ಗೆ ಸಂಬಂಧಿಸಿದ್ದ ಕಂಪನಿಗಳು ಬಿಜೆಪಿಗೆ ₹ 19.5 ಕೋಟಿ ದೇಣಿಗೆ ನೀಡಿದ ಪುರಾವೆ ಇದೆ. ಸೆಕ್ಷನ್ 182ರ ಕಂಪನಿ ಕಾಯ್ದೆ 2013 ಅನ್ನು ಉಲ್ಲಂಘಿಸಿವೆ ಎಂಬ ಆರೋಪವನ್ನು ಕೋಬ್ರಾಪೋಸ್ಟ್‌ ಮಾಡಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا