Urdu   /   English   /   Nawayathi

ವಿವಾದಕ್ಕೆ ಸಿಲುಕಿದ ಮಾಜಿ ಸಿಎಂ

share with us

ಮೈಸೂರು/ತಿ.ನರಸೀಪುರ: 29 ಜನುವರಿ (ಫಿಕ್ರೋಖಬರ್ ಸುದ್ದಿ) ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಕೈಗೆ ಸಿಗುತ್ತಿಲ್ಲ ಎಂದು ದೂರು ಹೇಳಿದ ಕಾಂಗ್ರೆಸ್‌ ಕಾರ್ಯಕರ್ತೆ ವಿರುದ್ಧ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಕೆಯ ಕೈಯಿಂದ ಮೈಕ್‌ ಕಸಿದುಕೊಂಡು ಏರಿದ ದನಿಯಲ್ಲಿ ಮಾತನಾಡಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಸೋಮವಾರ ತಮ್ಮ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಮೊದಲಿಗೆ ತಿ.ನರಸೀಪುರ ತಾಲೂಕು ಗಗೇìಶ್ವರಿ ಗ್ರಾಮದಲ್ಲಿ ಕೆಪಿಟಿಸಿಎಲ್‌ವತಿಯಿಂದ ನಿರ್ಮಿಸಲಾಗುವ ಪವರ್‌ ಸ್ಟೇಷನ್‌ಗೆ ಶಂಕುಸ್ಥಾಪನಾ ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದರು. ಈ ವೇಳೆ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಜಮಾಲ್‌ ಅರಾ, ತಹಶೀಲ್ದಾರ್‌ ಸೇರಿದಂತೆ ಯಾವ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಒಂದು ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರ ಯಾವ ಕೆಲಸ-ಕಾರ್ಯಗಳನ್ನು ಮಾಡಿಸಿಕೊಡಲಾಗುತ್ತಿಲ್ಲ. ನಮ್ಮ ಕೆಲಸಗಳೇ ಆಗುತ್ತಿಲ್ಲ ಎಂದರೆ, ಇನ್ನು ಜನಸಾಮಾನ್ಯರ ಕೆಲಸಗಳಾಗುತ್ತವೆಯೇ ಎಂದು ಪ್ರಶ್ನಿಸಿದರು. ಇದನ್ನು ಸಾವಧಾನದಿಂದಲೇ ಆಲಿಸಿದ ಸಿದ್ದರಾಮಯ್ಯ ಆಯ್ತಮ್ಮ, ಇದನ್ನು ಎಂಎಲ್‌ಎ ಗಮನಕ್ಕೆ ತಂದಿದ್ದೀಯಾ ಎಂದು ಪ್ರಶ್ನಿಸಿದರು. ಎಲ್ಲಿ ಸಾರ್‌, ಎಂಎಲ್‌ಎ ಅವ್ರು ಕೈಗೇ ಸಿಗಲ್ಲಎಂದು ಸಿದ್ದರಾಮಯ್ಯ ಎದುರಿಗಿದ್ದ ಟೇಬಲ್‌ ಕುಟ್ಟಿದರು, ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಎದ್ದು ನಿಂತು ಆಕೆಯ ಕೈಯಲ್ಲಿದ್ದ ಮೈಕ್‌ ಕಸಿದುಕೊಳ್ಳಲು ಹೋದಾಗ ಆಕೆ ಧರಿಸಿದ್ದ ಚೂಡಿದಾರ್‌ನ ವೇಲ್‌ ಜೊತೆಗೆ ಬಂತು ಅದನ್ನು ಸಿದ್ದರಾಮಯ್ಯ ಆಕೆಗೆ ಎತ್ತಿಕೊಟ್ಟರು. ಆದರೂ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಸಿದ್ದರಾಮಯ್ಯ ತಮ್ಮ ಎಡಗೈನಿಂದ ಆಕೆಯ ಭುಜವನ್ನು ಅದುಮಿ ಕೂರಿಸಿದರು. 

ಆದರೂ ಸಿಟ್ಟು ತಣಿಯದ ಸಿದ್ದರಾಮಯ್ಯ, ಏನಮ್ಮಾ ನನ್ನ ಎದುರಿಗೇ ನೀನು ಟೇಬಲ್‌ ಕುಟ್ಟಿ ಮಾತಾಡ್ತಿಯಾ ಎಂದು ಏರು ದನಿಯಲ್ಲಿ ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದನ್ನು ಕಂಡ ಜನರು ಆಕೆಯ ಬಾಯಿಮುಚ್ಚಿಸುವ ಕೆಲಸ ಮಾಡಿದರು. ಕಡೆಗೆ ಆಕೆ ನನ್ನಿಂದ ತಪ್ಪಾಗಿದೆ ಎಂದು ಕೇಳಿಕೊಂಡರು. ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನಾ ಅವರು ದಿನವೆಲ್ಲಾ ಶಾಸಕರು ಇಲ್ಲೇ ಇರ್ತಾರಲ್ಲಮ್ಮ ಎಂದು ಸಮಜಾಯಿಷಿ ನೀಡಿದರು. ನಂತರ ಆಕೆಯನ್ನು ಕೂರಿಸಿ ಮಾತನಾಡಿದ ಸಿದ್ದರಾಮಯ್ಯ, ಇದು ನಮ್ಮ ಸರ್ಕಾರವಲ್ಲ. ಸಮ್ಮಿಶ್ರ ಸರ್ಕಾರ ಅನ್ನೋದನ್ನ ನೀವು ತಿಳ್ಕೊàಬೇಕು, ಎಸಿ, ತಹಶೀಲ್ದಾರ್‌ರನ್ನ ಅವರಿಗೆ ಬೇಕಾದವರನ್ನು  (ತಿ.ನರಸೀಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಅಶ್ವಿ‌ನ್‌ಕುಮಾರ್‌) ಹಾಕಿಸಿಕೊಂಡಿರ್ತಾರೆ. ನಿಮ್ಮ ಊರ ಕೆಲಸ ಆಗಬೇಕಾದ್ರೆ, ತಹಶೀಲ್ದಾರ್‌ ಕೆಲಸ ಮಾಡಿಕೊಡ್ತಿಲ್ಲ ಅಂತ ನನಗೆ ಮೊದಲೇ ಹೇಳಿದ್ರೆ ಆ ಅಧಿಕಾರಿ ಕರೆಸಿ ಕ್ಯಾಕರಿಸಿ ಉಗೀತಿದ್ದೆ. ನೋಡಮ್ಮ ತಾಯಿ 40 ವರ್ಷ ಆಯ್ತು ನಾನು ರಾಜಕೀಯಕ್ಕೆ ಬಂದು, 8 ಸಾರಿ ಎಂಎಲ್‌ಎ ಆಗಿದ್ದೇನೆ. ನಾವೇನೋ ದೇಶಕ್ಕೆ ಅನ್ಯಾಯ ಮಾಡಿರೋರ ಥರಾ ಮಾಡ್ತೀಯಾ, ನನ್ನ ಎದುರೇ ನೀನು ಟೇಬಲ್‌ ಕುಟ್ಟಿ ಮಾತಾಡ್ತೀಯಲ್ಲ. ನಾನು ಬಂದಾಗ ಬಂದು ನೋಡಿ ಕೆಲಸ ಮಾಡಿಸಿಕೊಳ್ಳಬೇಕು. ಯಾವಾಗ ಬರಿ¤àನಿ ಅನ್ನೋದನ್ನೆಲ್ಲಾ ಹೇಳಿ ಬರೋಕಾಗುತ್ತಾ? ಹೇಳ್ಳೋದಕ್ಕೂ ರೀತಿ ನೀತಿ ಬೇಕಲ್ಲಮ್ಮಾ ಎಂದು ಮಹಿಳೆಯನ್ನು ಸಮಾಧಾನ ಪಡಿಸಿದರು. ಈ ವೇಳೆ ಸಂಸದ ಆರ್‌.ಧ್ರುವನಾರಾಯಣ, ಜಿ.ಪಂ ಸದಸ್ಯೆ ಜಯಮ್ಮ, ಜಿ.ಪಂ ಮಾಜಿ ಅಧ್ಯಕ್ಷ ಕೆ .ಸಿ.ಬಲರಾಂ, ಮಾಜಿ ಸದಸ್ಯ ಕೆ.ಮಹದೇವ,  ಮುಖಂಡ ಗೋಪಾಲರಾಜು, ಸಂತೃಪ್ತಿ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇÍ,… ಅಮ್ಜದ್‌ ಖಾನ್‌, ಪುರಸಭಾ ಸದಸ್ಯ ಸೋಮು ಮತ್ತಿತರರು  ಹಾಜರಿದ್ದರು.

ಸಹೋದರಿ ಸಮಾನ
ಘಟನೆಯ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಭಿತ್ತರವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಸಿದ್ದರಾಮಯ್ಯ ಅವರ ವರ್ತನೆಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ಮಹಿಳೆ ದೀರ್ಘ‌ ಭಾಷಣ ಮಾಡುತ್ತಿದ್ದನ್ನು ನಿಲ್ಲಿಸಲು ಹೋದಾಗ ಅಕಸ್ಮಾತ್‌ ನಡೆದ ಘಟನೆ ಇದು. ದುರುದ್ದೇಶದಿಂದ ಈ ಘಟನೆ ನಡೆದಿಲ್ಲ. ಜಮಾಲಾ ಅರಾ ನನಗೆ 15 ವರ್ಷದಿಂದ ಪರಿಚಯ, ಆಕೆ ನನ್ನ ಸಹೋದರಿ ಸಮಾನ ಎಂದು ಟ್ವೀಟ್‌ ಮಾಡಿದ್ದಾರೆ.

ತನಿಖೆ ಕೋರಿ ಪೊಲೀಸರಿಗೆ ಪತ್ರ: ಮಹಿಳಾ ಆಯೋಗ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯೊಬ್ಬರ ಜತೆ ಅವಹೇಳನಕಾರಿಯಾಗಿ ವರ್ತಿಸಿರುವ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ಪೊಲೀಸರಿಗೆ ಪತ್ರ ಬರೆಯುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ತಿಳಿಸಿದೆ. ಘಟನೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಮಹಿಳಾ ಆಯೋಗ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಈ ಬಗ್ಗೆ ಸದ್ಯದಲ್ಲೇ ಪೊಲೀಸರಿಗೆ ಪತ್ರ ಬರೆಯುವುದಾಗಿ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا