Urdu   /   English   /   Nawayathi

ಇದೂ ಗರೀಬಿ ಹಠಾವೋ ರೀತಿ ನಕಲಿನಾ?: ರಾಹುಲ್ ಗಾಂಧಿ ಕನಿಷ್ಟ ಆದಾಯ ಭದ್ರತೆ ಭರವಸೆ ಕುರಿತು ಮಾಯಾವತಿ

share with us

ನವದೆಹಲಿ: 29 ಜನುವರಿ (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಎಲ್ಲಾ ಬಡವರಿಗೂ ಕನಿಷ್ಠ ಆದಾಯದ ಭದ್ರತೆ ಒದಗಿಸಲಾಗುವುದು ಎಂಬ ರಾಹುಲ್ ಗಾಂಧಿ ಭರವಸೆಯ ಬಗ್ಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಬಡವರಿಗೆ ಕನಿಷ್ಟ ಆದಾಯದ ಭದ್ರತೆಯ ಭರವಸೆಯೂ ಗರೀಬಿ ಹಠಾವೋ ಮಾದರಿ ನಕಲೀನಾ? ಎಂದು ಮಾಯಾವತಿ ಟ್ವೀಟ್ ನಲ್ಲಿ ಕೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಮಾಯಾವತಿ, ಎರಡೂ ಪಕ್ಷಗಳು ಸುಳ್ಳು ಭರವಸೆಗಳಿಂದ ಜನರನ್ನು ಮೂರ್ಖರನ್ನಾಗಿಸಿವೆ ಎಂದು ಮಾಯಾವತಿ ಆರೋಪಿಸಿದ್ದಾರೆ. 

View image on Twitter

ANI✔@ANI

BSP Chief Mayawati on Rahul Gandhi's announcement on : Is this promise also a fake one like 'Gareebi hatao' & current government's promises on black money, 15 lakh & achhe din? Both Congress & BJP have failed, & proved to be two sides of the same coin.

301

14:37 - 29 Jan 2019

157 people are talking about this

Twitter Ads information and privacy

ಇದಕ್ಕೂ ಮುನ್ನ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನೆರವಾದ ರೈತರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನ ಹಾಗೂ ಹಸಿವಿನಿಂದ ಮುಕ್ತಗೊಳಿಸಲು ದೇಶದಲ್ಲಿನ  ಪ್ರತಿಯೊಬ್ಬ ಬಡವರಿಗೂ ಕನಿಷ್ಠ ಆದಾಯದ ಭದ್ರತೆ  ಒದಗಿಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಭರವಸೆ ಎಂದಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا