Urdu   /   English   /   Nawayathi

ಈ ಬಾರಿ ಕೇಂದ್ರ ಬಜೆಟ್​ನಲ್ಲಿ ರೈತರಿಗೆ ಸಿಗಲಿದೆಯಾ ಬಂಪರ್​..? ಇರುವ ಸವಾಲುಗಳೇನು..?

share with us

ನವದೆಹಲಿ: 28 ಜನುವರಿ (ಫಿಕ್ರೋಖಬರ್ ಸುದ್ದಿ) ದೇಶಾದ್ಯಂತ ಕಳೆದ ಐದುವರ್ಷಗಳಲ್ಲಿ ರೈತರ 13 ಮಹಾ ಪ್ರತಿಭಟನೆಗಳು ನಡೆದಿವೆ. 2014-16 ರವರೆಗೂ ಸುಮಾರು 36370 ರೈತರು ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ,  ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್​ ರಾಜ್ಯಗಳು ರೈತರ ಸಾಲಮನ್ನಾ ಘೋಷಣೆ ಮಾಡಿವೆ.  ಆದರೂ ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿಂತಿಲ್ಲ. ರೈತರ ಸಾಲ ಹಾಗೂ ಕೃಷಿ  ಮತ್ತು ನಿರಂತರ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳು, ಭೀಕರ ಬರ ಸಮಸ್ಯೆಗಳು ರೈತರನ್ನ ಸಂಕಷ್ಟಕ್ಕೆ ದೂಡುತ್ತಲೇ ಇವೆ. ಆದರೆ, ಪರಿಹಾರ ಮಾತ್ರ ಸಿಕ್ಕುತ್ತಲೇ ಇಲ್ಲ. ಒಂದ್ಕಡೆ ರಾಜ್ಯ ಸರ್ಕಾರಗಳು ಸಾಲ ಮನ್ನಾ ಮಾಡಿ,  ಹಣಕಾಸು ಹೊಂದಿಸಲು ಹರಸಾಹಸ ಮಾಡುತ್ತಿದ್ದು, ಚಾಲ್ತಿ ಖಾತೆ ಕೊರತೆ ಹಾಗೂ ಆರ್ಥಿಕ ಶಿಸ್ತಿನ  ಸಮಸ್ಯೆ ಮೈಮೇಲೆ ಎಳೆದುಕೊಂಡಿವೆ. ಈ ನಡುವೆ ಕೇಂದ್ರ ಸರ್ಕಾರವೂ  ರೈತರ ಸಾಲಮನ್ನಾ ಮಾಡಬೇಕಾದ ಇಲ್ಲವೇ ರೈತರ ಸಮಸ್ಯೆಗಳ ಪರಿಹಾರಕ್ಕೆ ಏನಾದರೂ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ.  ರೈತರ ಸಾಲಮನ್ನಾ ಘೋಷಣೆ ಮಾಡದೇ ಬಿಜೆಪಿ ಮಧ್ಯಪ್ರದೇಶ್​, ಛತ್ತೀಸ್​ಗಢವನ್ನ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡದಿದ್ದರೂ  ಕೃಷಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರ ಖಾತೆಗೆ ನೇರವಾಗಿ ಇಂತಿಷ್ಟು ಹಣ ಹಾಕುವ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ಮುಂಬರುವ ಸಚಿವ ಸಂಪುಟ ಸಭೆ ಇಲ್ಲವೇ ಬಜೆಟ್​ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.    ಹೀಗೇನಾದರೂ ಸರ್ಕಾರ ನಿರ್ಧಾರ ಕೈಗೊಂಡರೆ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ,  ಸರ್ಕಾರ ಸುಮಾರು  1.5 ಲಕ್ಷ ಕೋಟಿ ರೂ.  ಆದಾಯ ಕೊರತೆ ಎದುರಿಸುತ್ತಿದೆ ಎಂಬ ಮಾತಿದೆ.  ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ಯೋಜನೆಗಳನ್ನ ಘೋಷಣೆ ಮಾಡಿದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ಹೆಚ್ಚುವರಿ ಆದಾಯ ತುಂಬಿಕೊಳ್ಳಲು ನೇರವಾಗಿ ತೆರಿಗೆ ಹೆಚ್ಚಳಕ್ಕೆ ಕೈಹಾಕಬೇಕಾಗುತ್ತದೆ. ಆದರೆ ಚುನಾವಣೆ ವರ್ಷವಾಗಿರುವುದರಿಂದ ತೆರಿಗೆ ಹೆಚ್ಚಳ ಅಪಾಯಕ್ಕೆ ಆಹ್ವಾನ ಮಾಡಿಕೊಂಡಂತೆಯೇ ಸರಿ. ಹೀಗಾಗಿ ಬೊಕ್ಕಸ ಖಾಲಿ ಆಗದಂತೆ ಹಾಗೂ ಅತ್ತ ಜನಪ್ರಿಯ ಯೋಜನೆಗಳನ್ನ ಹೇಗೆ ಘೋಷಣೆ ಮಾಡುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.   ಈ ನಡುವೆ ಖಾಯಂ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ  ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ಅರ್ಥ ಸಚಿವ ಪಿಯೂಶ್​ ಗೋಯಲ್​ ಮಧ್ಯಂತರ ಬಜೆಟ್​ ಮಂಡನೆ ಮಾಡಲಿದ್ದಾರೆ. ಹೀಗಾಗಿ ದೇಶದ ಚಿತ್ತ ಫೆಬ್ರವರಿ 1 ರ ಬಜೆಟ್​​ನತ್ತಲೇ ನೆಟ್ಟಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا