Urdu   /   English   /   Nawayathi

ಇಲ್ಲಿಯವರೆಗೆ ಎಷ್ಟು ಮಂದಿ ಮುಸ್ಲಿಮರಿಗೆ, ದಲಿತರಿಗೆ 'ಭಾರತ ರತ್ನ' ನೀಡಿದ್ದಾರೆ; ಅಸದುದ್ದೀನ್ ಓವೈಸಿ

share with us

ಹೈದರಾಬಾದ್: 28 ಜನುವರಿ (ಫಿಕ್ರೋಖಬರ್ ಸುದ್ದಿ) ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಭಾರತ ರತ್ನ ನೀಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂದು ಎ,ಐ,ಎಂ,ಐ,ಎಂ ನಾಯಕ, ಸಂಸದ ಅಸದುದ್ದೀನ್ ಒವೈಸಿ ಆರೋಪಿಸಿದ್ದಾರೆ. ಇದುವರೆಗೆ ಎಷ್ಟು ಮಂದಿ ದಲಿತರು, ಆದಿವಾಸಿಗಳು, ಮುಸ್ಲಿಮರು, ಬಡವರು, ಮೇಲ್ಜಾತಿಯವರು ಅಥವಾ ಬ್ರಾಹ್ಮಣರು ಭಾರತ ರತ್ನ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ವಿವರ ನೀಡಲಿ. ಭಾರತ ರತ್ನವನ್ನು ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯವೆಸಗುತ್ತಾ ಬಂದಿವೆ. ಕೇವಲ ಮೇಲ್ಜಾತಿಯವರನ್ನು ಪರಿಗಣಿಸಲಾಗುತ್ತಿದೆ. ಸಂವಿಧಾನ ಕರ್ತೃ ಡಾ ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ಬಲವಂತವಾಗಿ ನೀಡಲಾಯಿತೇ ಹೊರತು ಮನಃಪೂರ್ವಕವಾಗಿ ಕೊಟ್ಟದ್ದಲ್ಲ ಎಂದು ಟೀಕಿಸಿದರು. ದೇಶದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರನ್ನು ಮೋದಿ ಸರ್ಕಾರ ಕೂಡ ನಿರ್ಲಕ್ಷಿಸಿರುವುದು ದುರಂತ ಎಂದು ಶಿವಸೇನೆ ಕೂಡ ಸರ್ಕಾರವನ್ನು ಟೀಕಿಸಿತ್ತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಗಾಯಕ ಭೂಪೇನ್ ಹಜಾರಿಕಾ ಮತ್ತು ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್ ಮುಖ್ ಅವರಿಗೆ ಈ ವರ್ಷ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا