Urdu   /   English   /   Nawayathi

ಐಆರ್‌ಎಸ್‌ ಅಧಿಕಾರಿ ಮನೆಯಲ್ಲಿ 2.26 ಕೋಟಿ ನಗದು, ಆಸ್ತಿ ಪತ್ತೆ..!

share with us

ಜೈಪುರ: 27 ಜನುವರಿ (ಫಿಕ್ರೋಖಬರ್ ಸುದ್ದಿ) ರಾಜಸ್ತಾನ ಪ್ರಭಾವಿ ಮತ್ತು ಕೋಟ್ಯಾಧಿಪತಿ ಐಆರ್‌ಎಸ್‌ (ಭಾರತೀಯ ಆದಾಯ ಸೇವೆ) ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 2.26 ಕೋಟಿ ರೂ. ನಗದು ಮತ್ತು ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ. ಎಸಿಬಿ ತಂಡ ಜೈಪುರದಲ್ಲಿನ ಐಆರ್‍ಎಸ್ ಅಧಿಕಾರಿ ಸಾಯಿರಾಮ್ ಮೀನಾ ಅವರ ನಿವಾಸದ ಮೇಲೆ ದಾಳಿ ನಡೆಸಿ 2.26 ಕೋಟಿ ರೂ. ನಗದು, 6 ಲಕ್ಷ ರೂ. ಮೌಲ್ಯದ ಚಿನ್ನಾಭಾರಣ ಹಾಗೂ ಅವರಿಗೆ ಸೇರಿದ ಅಪಾರ ಆಸ್ತಿಗಳ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಯಿ ರಾಮ್ ಮೀನಾ ರಾಜಸ್ತಾನದ ರಾಜಧಾನಿ ಜೈಪುರದ ಹೃದಯ ಭಾಗದಲ್ಲಿ ಪೆಟ್ರೋಲ್ ಪಂಪ್. ಒಂದು ಭವ್ಯ ಫ್ಲಾಟ್, 25 ಶಾಪ್‍ಗಳು ಮತ್ತು 82 ನಿವೇಶನಗಳಿಗೆ ಸಂಬಂಧಪಟ್ಟ ದಾಖಲೆಗಳು ಮತ್ತು ಕಾಗದಪತ್ರಗಳನ್ನು ಸಹ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ಈ ಐಆರ್‍ಎಸ್ ಅಧಿಕಾರಿ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಸಿಬಿ ಈ ದಾಳಿಗಳನ್ನು ನಡೆಸಿದ್ದು, ಮೀನಾ ವಿರುದ್ಧ ಮುಂದಿನ ಕ್ರಮ ಕೈಗೊಂಡಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا