Urdu   /   English   /   Nawayathi

ಐಸಿಐಸಿಐ ಬ್ಯಾಂಕ್​ ಮಾಜಿ ಎಂಡಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಸಿಬಿಐ ಅಧಿಕಾರಿ ಎತ್ತಂಗಡಿ

share with us

ನವದೆಹಲಿ: 27 ಜನುವರಿ (ಫಿಕ್ರೋಖಬರ್ ಸುದ್ದಿ) ಐಸಿಐಸಿಐ- ವಿಡಿಯೋಕಾನ್ ಸಾಲ ನೀಡಿಕೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮಾಜಿ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್ ಆಕೆಯ ಪತಿ ದೀಪಕ್​ ಕೊಚ್ಚಾರ್, ವಿಡಿಯೋಕಾನ್ ಸಮೂಹದ ಎಂಡಿ ವಿ.ಎನ್​. ದೂತ್ ಹಾಗೂ ಇತರರ ವಿರುದ್ಧ ಮೂರು ದಿನಗಳ ಹಿಂದಷ್ಟೆ ಎಫ್​ಐಆರ್​ ದಾಖಲಿಸಿಕೊಂಡಿದ್ದ ಸಿಬಿಐ ಅಧಿರಿಯೊಬ್ಬರನ್ನು ಎತ್ತಂಗಡಿ ಮಾಡಲಾಗಿದೆ. 2012ರಲ್ಲಿ ಐಸಿಐಸಿಐ ಬ್ಯಾಂಕಿನಿಂದ ವಿಡಿಯೋಕಾನ್ ಸಮೂಹ ₹ 3,250 ಕೋಟಿ ಸಾಲ ಪಡೆದ ಬಳಿಕ, ವಿಡಿಯೋಕಾನ್ ಸಮೂಹದ ಪ್ರಚಾರಕ ವೇಣುಗೋಪಾಲ್ ದೂತ್ ಅವರು ಚಂದಾ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್​ ಅವರೊಂದಿಗೆ ಸ್ಥಾಪಿಸಿದ್ದ ನೂಪವರ್​ ಸಂಸ್ಥೆಯಲ್ಲಿ ಕೋಟ್ಯಂತರ ಹಣ ಹೂಡಿಕೆ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು. ಈ ಮೂವರ ಆಪಾದಿತರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ತೀವ್ರಗೊಳಿಸಿದ್ದ ಸಿಬಿಐನ ಬ್ಯಾಂಕಿಂಗ್ ಮತ್ತು ಭದ್ರತಾ ವಂಚನಾ ಘಟಕದ ಅಧಿಕಾರಿ ಸುಧಾಂಶು ಧಾರ್ ಮಿಶ್ರಾ ಅವರನ್ನು ರಾಂಚಿಯ ಆರ್ಥಿಕ ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ. ಎಫ್​ಐಆರ್ ದಾಖಲಾದ  ಒಂದೇ ದಿನದಲ್ಲಿಯೇ ಎತ್ತಂಗಡಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا