Urdu   /   English   /   Nawayathi

ಸಾಲ ವಸೂಲಿಗೆ ಹೇಗಿದೆ ನೋಡಿ ಲೇಡಿ ರೌಡಿಸಂ..!

share with us

ತುಮಕೂರು: 26 ಜನುವರಿ (ಫಿಕ್ರೋಖಬರ್ ಸುದ್ದಿ) ಸಂಘದಲ್ಲಿ ಹಣ ಪಡೆದು ಮಹಿಳೆ ಫೋರ್ತಿ ಹಣಕಟ್ಟಲು ಸಾದ್ಯ ವಾಗದೆ ಇರುವ ಮಹಿಳೆಗೆ ಹಿಗ್ಗಾಮುಗ್ಗ ತಳಿಸಿ ಬೀದಿಯಲ್ಲಿ ಎಳೆದಾಡಿದ ಸದಸ್ಯೆಯರು. ಅಕೆ ಒಂದು ಹೆಣ್ಣು ಅನ್ನುವುದನ್ನು ಮರೆತು ಕಾಡು ಪ್ರಾಣಿಗಳಿಂಗಿಂತ ಕೇಳಾಗಿ ನೆಡೆದು ಕೊಂಡ ಘಟನೆ ಗುಬ್ಬಿಯಲ್ಲಿ ನೆಡೆದಿದೆ. ಮಹಿಳಾ ಸಂಘದಲ್ಲಿ ಹಣ ಪಡೆದಿದ್ದ ಮಹಿಳೆ ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಿಲ್ಲವೆಂದು ಸಂಘದ ಇತರೆ ಮಹಿಳಾ ಸದ್ಯರು ಹಿಗ್ಗಾ ಮುಗ್ಗಾ ತಳಿಸಿ ಬೀದಿಯಲ್ಲಿ ಎಳೆದಾಡಿ ಅಮಾನವೀಯವಾಗಿ ವರ್ತಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಸವಿತಾ ಎಂಬ ಮಹಿಳೆಗೆ ಹಲ್ಲೆ ನಡೆಸಿ ,ಕಾಲಲ್ಲಿ ಒದ್ದು ಕಿರುಚಾಡಿದ್ರು ಬಿಡದೆ ನಡು ಬೀದಿಯಲ್ಲಿ ಎಳೆದೊಯ್ದು ಅಮಾನವೀಯ ವಾಗಿ ವರ್ತಿಸಿದ್ದಾರೆ. ಸವಿತಾರನ್ನ ಎಳೆ ದೊಯ್ಯುವಾಗ ಬೀದಿ ನಾಯಿಯೋಂದು ಕಚ್ಚಲು ಪ್ರಯತ್ನಿಸುತ್ತಿದ್ದು ನೋಡುತ್ತಾ ನಿಂತ ಸಾರ್ವಜನಿಕರು ಮಹಿಳೆಯ ಸಹಾಯಕ್ಕೆ ಬರದೆ ಮಾನವೀಯತೆ ಮರೆತರು.ಈ ದೃಷ್ಯಗಳು ಇದೀಗ ಈ ಸಂಜೆ ಪತ್ರಿಕೆಗೆ ಲಭ್ಯವಾಗಿದೆ. ಗುಬ್ಬಿ ಪಟ್ಟಣದ ಮಡಿವಾಳ ಬೀದಿಯ ನಿವಾಸಿ ಸವಿತಾಳನ್ನ ಅಕೆಯ ಗಂಡ ತೊರೆದು ಹೋಗಿದ್ದು ಈಕೆ ಮನೆಗೆಲಸ ಮಾಡಿಕೊಂಡು ತನ್ನ ಮಗುವನ್ನ ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಇದರ ನಡುವೆ ಸಂಘದಲ್ಲಿ ಪಡೆದಿದ್ದ ಸಾಲವನ್ನು ಕಟ್ಟಲು ಸಾದ್ಯ ವಾಗದೆ ಇರುವ ಪರಿಣಾಮ ಕಂಗಾಲಾಗಿದ್ದದರು ಇದರ ನಡುವೆ ಹಲವು ಮಹಿಳೆಯರು ಮನೆಯ ಹತ್ತಿರ ಬಂದು ಹೀನಾ ಮಾನವಾಗಿ ಬೈಯುತ್ತಾ ಸಾಲ ಕಟ್ಟಲು ಅಗದೆ ಇರುವವಳು ಸಾಲ ಯಾಕೆ ಪಡೆದೆ ಎಂದು ಹಲವು ಬಾರಿ ಗಲಾಟೆ ಮಾಡಿದ್ದರು.ಪಟ್ಟಣದ ಎಸ್ ಕೆಎಸ್ ಮಹಿಳಾ ಸಂಘದಲ್ಲಿ ಕಳೆದ ಕೆಲ ದಿನಗಳ ಹಿಂದೆ 25 ಸಾವಿರ ಹಣ ಸಾಲ ಪಡೆದು ಈಗಾಗಲೇ ಹತ್ತು ಸಾವಿರ ಮರುಪಾವತಿ ಮಾಡಿದ್ದಾರೆ.  ಉಳಿದ ಹಣ ನೀಡಲು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಸಂಘದ ಸದಸ್ಯರಾದ ಜಯಮ್ಮ,ಸಾಕಮ್ಮ ಎಂಬುವರು ನಡುಬೀದಿಯಲ್ಲೆ ಈ ಕೃತ್ಯ ಎಸಗಿದ್ದು ಮಹಿಳೆಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯವನ್ನು ಈ ಸಂಜೆ ಪತ್ರಿಕೆ ಗುಬ್ಬಿಯ ವೃತ್ತ ನಿರೀಕ್ಷರಾದ ದೀಪಕ್ ಅವರ ಗಮನಕ್ಕೆ ತಂದಾಗ ತಕ್ಷಣವೇ ಕಾರ್ಯ ಪ್ರವೃತ್ತ ರಾದ ಅವರು ಇಲ್ಲಿನ ಸಬ್ ಇನ್ ಸ್ಪೆಕ್ಟರ್ ಗಂಗಾಧರ ಅವರಿಗೆ ಸೂಚನೆ ನೀಡಿದ್ದಾರೆ. ಈ ವಿಡಿಯೋ ನೋಡಿದ ಸಬ್ ಇನ್ ಸ್ಪೆಕ್ಟರ್ ಮಹಿಳೆಯರನ್ನು ನೀವು ಏನು ಮನುಷ್ಯರೂ ಅಥಾವ ರಾಕ್ಷಸರು ಎಂದು ಕೆಂಡ ಮಂಡಲರಾಗಿದ್ದಾರೆ. ಸಂಘದ ಸದಸ್ಯರು ಸೇರಿದಂತೆ ಇತರರು ಮೇಲೆ ನಿರ್ಧಕ್ಷಣ್ಯ ವಾಗಿ ಕ್ರಮ ಕೈಗೊಳ್ಳುವಲ್ಲಿ ಮುಂದಾಗಿದ್ದಾರೆ

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا