Urdu   /   English   /   Nawayathi

ಹುಚ್ಚು ಸಾಹಸಗಳಿಗೆ ಕಡಿವಾಣ ಹಾಕಿ: ಕೊಚರ್ ತನಿಖೆ ಆರಂಭಿಸಿದ ಸಿಬಿಐಗೆ ಜೇಟ್ಲಿ ಸಲಹೆ

share with us

ನವದೆಹಲಿ: 26 ಜನುವರಿ (ಫಿಕ್ರೋಖಬರ್ ಸುದ್ದಿ) ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂಡಾ ಕೊಚರ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್‌ ಕ್ಷೇತ್ರದ ಪ್ರಭಾವಿ ಕೆ.ವಿ.ಕಾಮತ್ ಮತ್ತು ಇತರ ಪ್ರತಿಷ್ಠಿತರನ್ನು ವಿಚಾರಣೆಗೆ ಒಳಪಡಿಸಲು ನಿರ್ಧಾರಿಸಿದೆ. ಸಿಬಿಐನ ಈ ನಿರ್ಧಾರವನ್ನು ವಿಶ್ಲೇಷಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಿಬಿಐ ಇಂಥ ‘ಹುಚ್ಚುಸಾಹಸ’ಗಳನ್ನು ಕೈಬಿಟ್ಟು, ಆಗಬೇಕಿರುವ ಕೆಲಸಗಳ ಕಡೆಗೆ ಗಮನ ಕೊಡಬೇಕು ಎಂದು ಟ್ವಿಟ್ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಲೇಖನವನ್ನೂ ಪ್ರಕಟಿಸಿದ್ದಾರೆ. ಅಮೆರಿಕದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಜೇಟ್ಲಿ, ‘ಅಪರಾಧ ಪ್ರಕರಣಗಳಿಗೆ ಭಾರತದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಲು ಇಂಥ ಹುಚ್ಚು ಸಾಹಸಗಳು ಮತ್ತು ಅಧಿಕಾರ ಬಳಸಲು ಇರುವ ಆಸೆಯೇ ಕಾರಣ. ತನಿಖಾಧಿಕಾರಿಗಳ ವೃತ್ತಿಪರತೆ ಇದರಿಂದ ಕಡಿಮೆ ಆಗಿದೆ’ ಎಂದು ಹೇಳಿದ್ದಾರೆ. ಅಪರಾಧಕ್ಕಾಗಿ ಸಂಚು ಮತ್ತು ಮೋಸದ ಪ್ರಕರಣವನ್ನು ಸಿಬಿಐ ಗುರುವಾರ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂಡಾ ಕೊಚರ್ ಮತ್ತು ಅವರ ಪತಿ ದೀಪಕ್ ಕೊಚರ್ ವಿರುದ್ಧ ದಾಖಲಿಸಿತ್ತು. ಚಂದಾ ಕೊಚರ್‌ ಅವರ ಪತಿ ಮುಖ್ಯಸ್ಥರಾಗಿದ್ದ ಕಾರ್ಖಾನೆಯಲ್ಲಿ ವಿಡಿಯೊಕಾನ್ ಹೂಡಿಕೆ ಮಾಡಲಿದೆ ಎನ್ನುವ ಆಮಿಷಕ್ಕೆ ಪ್ರತಿಯಾಗಿ ಈ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಕ್ರಮವು ಬ್ಯಾಂಕ್‌ ಅನುಸರಿಸುತ್ತಿರುವ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಿಬಿಐ ಹೇಳಿತ್ತು. ಕೊಚರ್ ಅವರ ಅಧಿಕಾರ ಅವಧಿಯಲ್ಲಿ ವಿಡಿಯೊಕಾನ್ ಇಂಡಸ್ಟ್ರೀಸ್‌ಗೆ ಐಸಿಐಸಿಐ ಬ್ಯಾಂಕ್ ಸಾಲ ಮಂಜೂರು ಮಾಡಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್‌ ಕ್ಷೇತ್ರದ ಗಣ್ಯ ವ್ಯಕ್ತಿ ಕಾಮತ್, ಐಸಿಐಸಿಐ ಬ್ಯಾಂಕ್‌ನ ಹಾಲಿ ಸಿಇಒ ಸಂದೀಪ್ ಬಕ್ಷಿ, ಗೋಲ್ಡ್‌ಮನ್ ಸ್ಯಾಚ್ಸ್‌ ಇಂಡಿಯಾದ ಅಧ್ಯಕ್ಷ ಸಂಜಯ್ ಚಟರ್ಜಿ, ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ ಸಿಇಒ ಝರೀನ್ ದಾರುವಾಲಾ, ಟಾಟಾ ಕ್ಯಾಪಿಟಲ್‌ನ ಮುಖ್ಯಸ್ಥ ರಾಜೀವ್ ಸಭರ್‌ವಾಲ್ ಮತ್ತು ಟಾಟಾ ಕ್ಯಾಪಿಟಲ್‌ನ ಹಿರಿಯ ಸಲಹೆಗಾರ ಹೊಮಿ ಖುರ್ಸೊಖಾನ್ ಅವರ ವಿಚಾರಣೆ ನಡೆಸಬೇಕಿದೆ ಎಂದು ಸಿಬಿಐ ಹೇಳಿತ್ತು.

Arun Jaitley✔@arunjaitley

My advice to our investigators – avoid adventurism and follow the advice given to Arjun in the Mahabharata – Just concentrate on the bulls eye.

10.3K

8:15 PM - Jan 25, 2019

Twitter Ads info and privacy

2,476 people are talking about this

‘ತನಿಖೆಯ ಹುಚ್ಚುಸಾಹಸಗಳಿಗೂ ದಿಟ್ಟತನದ ವೃತ್ತಿಪರ ತನಿಖೆಗೂ ಮೂಲಭೂತ ವ್ಯತ್ಯಾಸವಿದೆ’ ಎಂದು ಜೇಟ್ಲಿ ಬರೆದಿದ್ದಾರೆ.

‘ಭಾರತದಿಂದ ನಾನೀಗ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದೇನೆ. ಐಸಿಐಸಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುವ ಸಂಭವನೀಯರ ಬಗ್ಗೆ ಓದಿದಾದ, ಮೂಲ ಗುರಿಯನ್ನು ಕೈಬಿಟ್ಟು ಇನ್ಯಾವುದನ್ನೋ ತನಿಖಾ ಸಂಸ್ಥೆ ಬೆನ್ನು ಹತ್ತಿದೆ ಎನಿಸಿತು. ಪುರಾವೆ ಇದೆಯೋ–ಇಲ್ಲವೋ ನಾವು ಬ್ಯಾಂಕಿಂಗ್ ಉದ್ಯಮದ ಎಲ್ಲ ಪ್ರಮುಖರನ್ನೂ ಗುರಿಯಾಗಿಸುವುದರ ಅರ್ಥವಾದರೂ ಏನು? ಇದರಿಂದ ಏನು ಸಾಧಿಸಿದಂತೆ ಆಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.

Arun Jaitley✔@arunjaitley

Sitting thousands of kilometers away, when I read the list of potential targets in the ICICI case, the thought that crossed my mind was again the same – Instead of focusing primarily on the target, it is a journey to no where (everywhere).

3,126

8:14 PM - Jan 25, 2019

Twitter Ads info and privacy

957 people are talking about this

ಕಳೆದ ವಾರದವರೆಗೂ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ತಾತ್ಕಾಲಿಕವಾಗಿ ಅಧಿಕಾರವನ್ನು ಪಿಯೂಷ್ ಗೊಯೆಲ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ‘ನಮ್ಮ ತನಿಖಾಧಿಕಾರಿಗಳು ಮಹಾಭಾರತದ ಅರ್ಜುನನ ಆದರ್ಶವನ್ನು ಪಾಲಿಸಬೇಕು. ಗುರಿಯೊಂದನ್ನೇ ಕೇಂದ್ರವಾಗಿರಿಸಿಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ಮಾಡಿದ್ದಾರೆ.

Arun Jaitley✔@arunjaitley

My advice to our investigators – avoid adventurism and follow the advice given to Arjun in the Mahabharata – Just concentrate on the bulls eye.

10.3K

8:15 PM - Jan 25, 2019

Twitter Ads info and privacy

2,476 people are talking about this

ತನಿಖಾ ಸಂಸ್ಥೆಗಳ ಇಂಥ ಹುಚ್ಚು ಸಾಹಸಗಳು ಅವುಗಳ ಗೌರವಕ್ಕೆ ಧಕ್ಕೆ ತರುತ್ತವೆ. ಕಾಲಾನುಕ್ರಮದಲ್ಲಿ ಪ್ರತಿಬಂಧಕಾಜ್ಞೆಗಳು ಹೆಚ್ಚುತ್ತವೆಯೇ ವಿನಃ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಅಲ್ಲ. ವಿಚಾರಣೆಗೆ ಒಳಪಟ್ಟ ವ್ಯಕ್ತಿಗಳು ಈ ಸಂಸ್ಥೆಗಳಿಂದ ಹಿಂಸೆ ಅನುಭವಿಸುತ್ತಾರೆ, ಅವರ ಗೌರವಕ್ಕೆ ಧಕ್ಕೆಯಾಗುತ್ತದೆ ಮತ್ತು ಹಣಕಾಸು ನಷ್ಟವೂ ಆಗುತ್ತದೆ. ಅವರ ಕೆರಿಯರ್ ಹಾಳಾಗುತ್ತೆ’ ಎಂದು ಜೇಟ್ಲಿ ಹೇಳಿದ್ದಾರೆ. ‘ವೃತ್ತಿಪರ ತನಿಖಾ ಸಂಸ್ಥೆಗಳು ನಿಜವಾದ ಆರೋಪಿಗಳನ್ನು ಪುರಾವೆಗಳ ಆಧಾರದ ಮೇಲೆ ಗುರುತಿಸಿ ವಿಚಾರಣೆಗೆ ಒಳಪಡಿಸುತ್ತವೆ. ಊಹಾಪೋಹದ ರಮ್ಯ ಕಲ್ಪನೆಗಳನ್ನು ಆಧರಿಸಿ ಅಲ್ಲ. ನಿರ್ದಿಷ್ಟವಾಗಿ ಇಂಥವರ ಮಾನಹಾನಿ ಮಾಡಬೇಕು ಎನ್ನುವ ಹಂಬಲ ಇರುವುದಿಲ್ಲ. ತಪ್ಪಿತಸ್ಥರನ್ನು ಗುರುತಿಸಿ ವಿಚಾರಣೆಗೆ ಒಳಪಡಿಸಿ ಮುಗ್ಧರನ್ನು ರಕ್ಷಿಸುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುತ್ತದೆ’ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا