Urdu   /   English   /   Nawayathi

ಬೆಂಗಳೂರು: ಪರೀಕ್ಷೆಯಲ್ಲಿ ಕಾಪಿ ಮಾಡಲು ಅವಕಾಶ ನೀಡದ್ದಕ್ಕೆ ಸಹಪಾಠಿಗೆ ಚಾಕು ಇರಿತ!

share with us

ಬೆಂಗಳೂರು: 24 ಜನುವರಿ (ಫಿಕ್ರೋಖಬರ್ ಸುದ್ದಿ) ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. 16 ವರ್ಷದ ವಿದ್ಯಾರ್ಥಿ ಈ ಕೃತ್ಯವೆಸಗಿದ್ದು ಕಾಮಾಕ್ಷಿಪಾಳ್ಯದಲ್ಲಿನ ಮೇರಿಯಾ ಸದನ ಸ್ಕೂಲ್‍ನಲ್ಲಿ ಈ ಘಟನೆ ವರದಿಯಾಗಿದೆ. 14 ಜನವರಿಯಿಂದಲೂ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯುತ್ತಿದೆ.ಸೋಮವಾರ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ನಡೆಯುತ್ತಿತ್ತು. ಆಗ ಒಟ್ಟಾರೆ 49  ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದೇ ಕೊಠಡಿಯ ಕಡೆ ಬೆಂಚ್ ನ ವಿದ್ಯಾರ್ಥಿಯೊಬ್ಬ ತನ್ನ ಮುಂದಿದ್ದವನಿಗೆ ಉತ್ತರ ಪತ್ರಿಕೆ ನೀಡಲು ಕೇಳೀದ್ದಾನೆ. ಇದಕ್ಕೆ ಆ ಇನ್ನೊಬ್ಬ ವಿದ್ಯಾರ್ಥಿ "ನಾನಿನ್ನೂ ಬರೆಯುವುದಿದೆ, ಈಗಲೇ ನೀಡಲು ಆಗಲ್ಲ" ಎಂದಿದ್ದನು. ಆಗ ಸುಮ್ಮನಾಗಿದ್ದ ಆರೋಪಿ ವಿದ್ಯಾರ್ಥಿಯು ಮತ್ತೆ 11 ಗಂಟೆ ಸುಮಾರಿಗೆ ಉತ್ತರ ಪತ್ರಿಕೆ ಕೇಳಲು ಮತ್ತೊಬ್ಬ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆ ನೀಡಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಯು ಪರೀಕ್ಷೆ ಮುಗಿದ ಬಳಿಕ ಶಾಲಾ ಅವರಣದಲ್ಲೇ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಗಾಯಗೊಂಡ ವಿದ್ಯಾರ್ಥಿಯನ್ನು ಸಹಪಾಠಿಗಳು, ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂತೆಯೇ ಆರೋಪಿ ವಿದ್ಯಾರ್ಥಿಯನ್ನು ಸಹ ಪೋಲೀಸರಿಗೆ ಒಪ್ಪಿಸಿದ್ದಾರೆ.

ಪೋಲೀಸರ ವಿಚಾರಣೆ ವೇಳೆ "ತಾನು ಸಹಪಾಠಿ ವಿದ್ಯಾರ್ಥಿಯನ್ನು ಉತ್ತರ ಪತ್ರಿಕೆಗಾಗಿ ಕೇಳಿದೆ, ಆತ ನೀಡದ ಕಾರಣ ನನಗೆ ನಿರಾಶೆಯಾಗಿತ್ತು." ಎಂದಿದ್ದಾನೆ.ಇನ್ನು ಆರೊಪಿ ವಿದ್ಯಾರ್ಥಿಯು ಶಾಲೆಯ ಇತರೆ ವಿದ್ಯರ್ಥಿಗಳನ್ನು ಹೊಡೆಯುವುದು, ತೊಂದರೆ ಕೊಡುವುದರ ಬಗ್ಗೆ ತರಗತಿಯ ಬೇರೆ ವಿದ್ಯಾರ್ಥಿಗಳು ಸಹ ಶಿಕ್ಷಕರಿಗೆ ಈ ಹಿಂದೆ ದೂರಿತ್ತಿದ್ದರು. ಇದರ ಸಂಬಂಧ ಶಾಲಾ ಶಿಕ್ಷಕರು ಬಾಲಕನ ಪೋಷಕರನ್ನು ಕರೆದು ತಿಳುವಳಿಕೆ ನಿಡುವಂತೆ ಎಚ್ಚರಿಸಿದ್ದರು ಎಂದು ಪೋಲೀಸರು ಘೇಳಿದ್ದಾರೆ. ಸದ್ಯ ಕೊಲೆ ಯತ್ನದ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯು ಬಾಲಾಪರಾಧಿ ನ್ಯಾಯಾಲಯದ ಮುಂದೆ ಹಾಜರಾಗಿ ಶಿಕ್ಷೆ ಅನುಭವಿಸಬೇಕಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا