Urdu   /   English   /   Nawayathi

ಸಾಲಮನ್ನಾ ಕೇವಲ ಕಣ್ಣಾಮುಚ್ಚಾಲೆ: ರೈತರಿಗೆ ಸಿಕ್ಕ ಸಾಲಮನ್ನಾ ಹಣ ಕೇಳಿದ್ರೆ ಮೂರ್ಛೆ ಗ್ಯಾರಂಟಿ...!!

share with us

ಭೋಪಾಲ್​​: 24 ಜನುವರಿ (ಫಿಕ್ರೋಖಬರ್ ಸುದ್ದಿ) ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳನ್ನ ಗೆದ್ದುಕೊಂಡು ಅತ್ಯುತ್ಸಾಹದಲ್ಲಿರುವ ಕಾಂಗ್ರೆಸ್​, ಆಡಳಿತ ಹಿಡಿದ ತಕ್ಷಣ ರೈತರ ಸಾಲಮನ್ನಾ ಘೋಷಣೆ ಮಾಡಿ ರೈತರ ಒಲವು ಗಳಿಸುವ ಯತ್ನ ಮಾಡಿತ್ತು. ಆದರೆ, ಸರ್ಕಾರ ಘೋಷಿಸಿದ್ದ ಸಾಲಮನ್ನಾ ಯೋಜನೆ ಅರ್ಹ ರೈತರಿಗೆ ತಲುಪಿಲ್ಲ. ತಲುಪಿದ್ದರೂ ಅದು 10, 20 , 50 ರೂಪಾಯಿಗಳಲ್ಲಿ ಇದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ನಡುವೆ ಮಧ್ಯೆಪ್ರದೇಶ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​  ಕಮಲನಾಥ್​ ಸರ್ಕಾರ ರೈತರಿಗೆ ಬಿಸ್ಕೇಟ್​ ಹಾಕಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಜನಕ್ಕೆ 10, 20 ಮತ್ತು 50 ರೂಗಳು ಮಾತ್ರ ಸಾಲಮನ್ನಾದ ಹಣ ಜಮಾ ಆಗಿದೆ. ಈ ಮೂಲಕ ರಾಜ್ಯ ಸರ್ಕಾರ ಸಾಲಮನ್ನಾ ಎಂಬ ತಮಾಷೆ ಮಾಡಿದೆ ಎಂದು ಹರಿಹಾಯ್ದಿದ್ದಾರೆ.   

View image on Twitter

ANI✔@ANI

Union minister Manoj Sinha: Farm loan waiver is just an eyewash. It has become a joke. Those who didn't take any loan have been included in lists of farm loan waiver. Had there not been upcoming elections, Congress would have simply said that they never made the announcement.

145

3:39 PM - Jan 24, 2019

66 people are talking about this

Twitter Ads info and privacy

ನಿನ್ನೆ ನಾನು ಸಾಲಮನ್ನಾ ಪ್ರಯೋಜನ ಪಡೆಯಲು ಅರ್ಹರಾದ ರೈತರ  ಪಟ್ಟಿಯನ್ನ ವೀಕ್ಷಣೆ  ಮಾಡಿದೆ. ಈ ಪಟ್ಟಿಯ ಅರ್ಧಕ್ಕರ್ಧ ಇಂಗ್ಲಿಷ್​​ನಲ್ಲಿ ಬೆರಳಚ್ಚು ಮಾಡಲಾಗಿದೆ.  ಹೀಗಿದ್ದರೆ ಜನ ಸಾಮಾನ್ಯ ಅರ್ಥ ಮಾಡಿಕೊಳ್ಳುವುದಾದರೂ ಹೇಗೆ ಎಂದು ಮಾಜಿ ಸಿಎಂ ಚೌಹಾಣ್​ ಪ್ರಶ್ನಿಸಿದ್ದಾರೆ. ಇನ್ನು ಸಾಲಮನ್ನಾದ ಬಗ್ಗೆ ಮಾತನಾಡಿರು ಕೇಂದ್ರ ಸಚಿವ ಮನೋಜ್​ ಸಿನ್ಹಾ,  ಕಾಂಗ್ರೆಸ್​ ನೇತೃತ್ವದ ರಾಜ್ಯ ಸರ್ಕಾರಗಳ ಈ ಘೋಷಣೆ ಕೇವಲ ಕಣ್ಣೊರಿಸುವ ತಂತ್ರ ಎಂದು ಲೇವಡಿ ಮಾಡಿದ್ದಾರೆ.  ಈ ಲಿಸ್ಟ್​ನಲ್ಲಿ ಸಾಲ ತೆಗೆದುಕೊಳ್ಳದೇ ಇರುವರ ಹೆಸರೂ ಇದೆ ಎಂದು  ಅವರು ಆರೋಪಿಸಿದ್ದಾರೆ.  ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ  ಕಾಂಗ್ರೆಸ್​ ಈ ಗಿಮಿಕ್​ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا