Urdu   /   English   /   Nawayathi

ದಿಲ್ಲಿಯಲ್ಲಿ ಸೋನು ಪುಂಜಬಾನ್‌ ಮೇಲೆ ದಾಳಿ, ಜೀವ ಬೆದರಿಕೆ

share with us

ಹೊಸದಿಲ್ಲಿ: 24 ಜನುವರಿ (ಫಿಕ್ರೋಖಬರ್ ಸುದ್ದಿ) ಮಾನವ ಕಳ್ಳಸಾಗಣೆ ಮೂಲಕ ಹೆಮ್ಮಕ್ಕಳನ್ನು ಬಲವಂತದಿಂದ ವೇಶ್ಯಾವಾಟಿಕೆಗೆ ರವಾನಿಸುತ್ತಿದ್ದ ಅಪರಾಧಕ್ಕಾಗಿ ಇಲ್ಲಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಮಹಿಳೆ ಸೋನು ಪುಂಜಬಾನ್‌ ಪ್ರಕೃತ ಪೆರೋಲ್‌ ಮೇಲೆ ಇದ್ದು ನಿನ್ನೆ ಬುಧವಾರ ಆಕೆ ತನ್ನ ಮನೆಗೆ ಹೋಗುತ್ತಿದ್ದಾಗ ಪೂರ್ವ ದಿಲ್ಲಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ನಿನ್ನೆ ಬುಧವಾರ ನಸುಕಿನ 4 ಗಂಟೆಯ ಸುಮಾರಿಗೆ ಗೀತಾ ಕಾಲನಿ ಪುಷ್ತಾ ಸಮೀಪ ಗುಂಡು ಹಾರಿಸಲಾದ ಸದ್ದು ಕೇಳಿ ಬಂದು ಶಕಾರ್‌ಪುರ ಪೊಲೀಸ್‌ ಠಾಣೆಯ ಅಧಿಕಾರಿಗಳು ಒಡನೆಯೇ ಸ್ಥಳಕ್ಕೆ ಧಾವಿಸಿದ್ದರು. ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತನ್ನ ಹೋಂಡಾ ಸಿಟಿ ವಾಹನವನ್ನು ತಡೆಯಲೆತ್ನಿಸಿ ಗುಂಡು ಹಾರಿಸಿದರೆಂದು ಸೋನು ಪೊಲೀಸರಿಗೆ ಹೇಳಿದ್ದಾಳೆ. 'ದಾಳಿ ಕೋರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ; ಕೂಡಲೇ ನಾನು ಘಟನೆಯ ಬಗ್ಗೆ ಪೊಲೀಸ್‌ ಕಂಟ್ರೋಲ್‌ ರೂಮಿಗೆ ಮಾಹಿತಿ ನೀಡಿದೆ' ಎಂದು ಸೋನು ಹೇಳಿದ್ದಾಳೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا