Urdu   /   English   /   Nawayathi

ಅಗಸ್ಟಾವೆಸ್ಟ್​​ಲ್ಯಾಂಡ್​​ ಹಣ ಮೈಕಲ್​ನಿಂದ ಇಂಗ್ಲೆಂಡ್​ಗೆ ವರ್ಗಾವಣೆ: ಸಿಬಿಐ

share with us

ನವದೆಹಲಿ: 23 ಜನುವರಿ (ಫಿಕ್ರೋಖಬರ್ ಸುದ್ದಿ) ಅಗಸ್ಟಾವೆಸ್ಟ್​ಲ್ಯಾಂಡ್​ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್​ ಮೈಕಲ್​ ಭಾರತೀಯ ಸಿಬಿಐಗೆ ಶರಣಾಗುವ ಸಂದರ್ಭದಲ್ಲಿ ಲಂಡನ್​ ಮೂಲದ ಹಲವು ಖಾತೆಗಳಿಗೆ ಹಗರಣದ ಹಣ ವರ್ಗಾವಣೆ ಮಾಡಿದ್ದಾಗಿ ಸಿಬಿಐ ಅಧಿಕಾರಿವೋರ್ವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಮೈಕಲ್​ ಬಂಧಿಯಾಗುವ ಸಂದರ್ಭದಲ್ಲಿ ಅಗಸ್ಟಾವೆಸ್ಟ್​ಲ್ಯಾಂಡ್​ ಹಗರಣದ ಹಣವನ್ನು ಲಂಡನ್ನಲ್ಲಿರುವ ಖಾತೆಗಳಿಗೆ ವರ್ಗಾಯಿಸಿರುವುದಾಗಿ ಸಿಬಿಐ ಸಂಶಯ ವ್ಯಕ್ತಪಡಿಸಿದೆ. ಈ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಬ್ರಿಟಿಷ್​ ಅಧಿಕಾರಿಗಳನ್ನು ಕೋರಲು ನ್ಯಾಯಾಂಗ ಅನುಮತಿ ನೀಡಬೇಕೆಂದು ಸಹ ಕೇಳಿಕೊಂಡಿದೆ. ಒಪ್ಪಂದದ ಮಧ್ಯವರ್ತಿಯಾಗಿದ್ದ ಮೈಕಲ್​ಗೆ 42.27 ಮಿಲಿಯನ್​ ಯುರೋ (ಸುಮಾರು 300 ಕೋಟಿ ರೂ.) ನೀಡಲಾಗಿತ್ತು. ಆದರೆ ಭಾರತೀಯ ರಾಜಕಾರಣಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಐಎಎಫ್​ನಿಂದ ಹಲವು ಮಿಲಿಯನ್​ ಕೋಟಿ ರೂಪಾಯಿ ಬರುವುದಿತ್ತು. ಬೃಹತ್​ ನಗದು ಹಣವನ್ನೇ ಪಡೆದುಕೊಂಡಿದ್ದ ಮೈಕಲ್​, ದುಬೈನ ಗ್ಲೋಬಲ್​ ಸರ್ವೀಸ್​ ಎಫ್​ಝೆಡ್​ಇ ಹಾಗೂ ಲಂಡನ್​ನ ಗ್ಲೋಬಲ್​ ಟ್ರೇಡ್​ ಅಂಡ್​ ಕಾಮರ್ಸ್​ ಸರ್ವೀಸ್​ ಎರಡು ಕಂಪನಿಗಳ ಖಾತೆಯಲ್ಲಿನ ಹಣವನ್ನು ಇನ್ನೂ ಪಡೆದಿಲ್ಲ. 2017 ಹಾಗೂ 2018ರಲ್ಲಿ ಸಿಬಿಐ ಈತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದ ಸಂದರ್ಭದಲ್ಲಿ ಆಗತಾನೆ ಜಾಮೀನಿನ ಮೇಲೆ  ಹೊರಬಂದಿದ್ದ ಮೈಕಲ್​, ತನ್ನ ಆಪ್ತ ಭಾರತೀಯ ಅಧಿಕಾರಿಗಳಿಂದ ಈ ಮಾಹಿತಿ ತಿಳಿದಿದ್ದ. ತರಾತುರಿಯಲ್ಲಿ ಬ್ರಿಟನ್​ನ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ ಸಿಬಿಐನ ಅಧಿಕಾರಿವೋರ್ವರು ತಿಳಿಸಿದ್ದಾರೆ. ಅರಬ್​ನಲ್ಲಿದ್ದ ಮೈಕಲ್​ ತನ್ನೆಲ್ಲಾ ವ್ಯಾಪಾರವನ್ನು ಕೊನೆಗೊಳಿಸಿ, ಅಲ್ಲಿಂದ ಕಾಲ್ಕಿಳಲು ಸಹ ಯತ್ನಿಸಿದ್ದ. ಆದರೆ ಕೊನೆಗೆ ಸಿಬಿಐಗೆ ಸಿಕ್ಕಿಬಿದ್ದ ಎಂದು ಅಧಿಕಾರಿವೋರ್ವರು ಮಾಹಿತಿ ನೀಡಿದ್ದಾರೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا