Urdu   /   English   /   Nawayathi

’ಇವಿಎಂ ಹ್ಯಾಕಿಂಗ್‌ ಸಾಧ್ಯ’ ಇದೊಂದು ಅಸಂಬದ್ಧ ಹೇಳಿಕೆ– ಚುನಾವಣಾ ಆಯೋಗ

share with us

ನವದೆಹಲಿ: 22 ಜನುವರಿ (ಫಿಕ್ರೋಖಬರ್ ಸುದ್ದಿ) ಭಾರತದ ಚುನಾವಣೆಗಳಲ್ಲಿ ಬಳಸಲಾಗಿರುವ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಹ್ಯಾಕ್‌ ಮಾಡಬಹುದೆಂದು ಘೋಷಿಸಿರುವ ಲಂಡನ್‌ ಮೂಲದ ಹ್ಯಾಕರ್‌ ಮಾತನ್ನು ಭಾರತೀಯ ಚುನಾವಣಾ ಆಯೋಗ ಸಾರಾಸಗಟಾಗಿ ತಳ್ಳಿಹಾಕಿದೆ. ಸೋಮವಾರ ಲಂಡನ್‌ನಲ್ಲಿ ನಡೆದಿರುವ ಹ್ಯಾಕಥಾನ್‌ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿರುವ ಸೈಬರ್‌ ತಜ್ಞ ಎಂದು ಹೇಳಿಕೊಳ್ಳುವ ಸಯೀದ್ ಶುಜಾ, ’ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ. ಭಾರತದ ಚುನಾವಣೆಗಳಲ್ಲಿ ಬಳಸಿರುವ ಇವಿಎಂಗಳನ್ನು ನಾನು ಹ್ಯಾಕ್‌ ಮಾಡಬಲ್ಲೆ’ ಎಂದು ಹೇಳಿಕೊಂಡಿದ್ದರು. ಇವಿಎಂ ಬಳಕೆ ನಿಲ್ಲಿಸಿ, ಬ್ಯಾಲೆಟ್‌ ಪೇಪರ್‌ ಬಳಕೆ ಪುನಃ ಆರಂಭಿಸುವಂತೆ ವಿರೋಧ ಪಕ್ಷಗಳು ಒತ್ತಡ ಹೇರುತ್ತಿರುವ ಬೆನ್ನಲೇ, ಶುಜಾ ನೀಡಿರುವ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا