Urdu   /   English   /   Nawayathi

ಕೂರ್ಮಗಢ ದ್ವೀಪದ ಸಮೀಪ ದೋಣಿ ಮುಳುಗಿ 8 ಮಂದಿ ದುರ್ಮರಣ

share with us

ಕಾರವಾರ: 21 ಜನುವರಿ (ಫಿಕ್ರೋಖಬರ್ ಸುದ್ದಿ) ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ ಕೊಪ್ಪಳದ ಆರು ಮಂದಿ ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ನರಸಿಂಹ ದೇವರ ಜಾತ್ರೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ದೋಣಿ ನಡುಗಡ್ಡೆ ಸಮೀಪ ಮಗುಚಿ ಬಿದ್ದಿದ್ದರಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹತ್ತು ಜನ ಬದುಕುಳಿದಿದ್ದಾರೆ ಎಂಬುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಏತನ್ಮಧ್ಯೆ ಶಾಸಕಿ ರೂಪಾಲಿ ನಾಯ್ಕ್ ಇದ್ದ ಬೋಟ್ ಮೂಲಕ 8 ಜನರನ್ನು ರಕ್ಷಿಸಲಾಗಿದೆ. ಕೊಪ್ಪಳ ಪ್ರವಾಸಿಗರ ಪೈಕಿ ಓರ್ವ ಮಗು ಬದುಕಿದೆ. ಸುಮಾರು 8 ಮಂದಿ ಸಾವನ್ನಪ್ಪಿದ್ದು ಇದರಲ್ಲಿ ಒಂದು ಮಗು ಕೂಡಾ ಸೇರಿದೆ ಎಂದು ತಿಳಿದು ಬಂದಿದೆ. ಮುಳುಗಿದ್ದ ಪ್ರವಾಸಿಗರನ್ನು ಗಣಪತಿ ಉಳ್ವೇಕರ್ ಸೇರಿದಂತೆ ಸ್ಥಳೀಯರು ರಕ್ಷಿಸಿದ್ದಾರೆ. ದೋಣಿಯಲ್ಲಿ ಚಾಲಕ ಸೇರಿದಂತೆ 26 ಮಂದಿ ಇದ್ದಿರುವುದಾಗಿ ಬದುಕುಳಿದ ಪ್ರವಾಸಿಗರು ಮಾಹಿತಿ ನೀಡಿದ್ದಾರೆ. ಕಾರವಾರದ ದೋಣಿ ದುರಂತದಲ್ಲಿ ನವೀನ್ ಎಂ ಪಾಲನಕರ್, ನೇಹ ನಿಲೇಶ್ ಪೆಡ್ನೇಕರ್, ರಾಧ ಕೆ, ವೈಭವ ವಿನೋದ್ ರಾಯ್ಕರ್, ಮಹೇಶ್ ಪಿ ಶೇಟ್, ಆದರ್ಶ ಶಿರೋಡ್ಕರ್, ದರ್ಶನ್ ಪಿ.ಶಿರೋಡ್ಕರ್ ಬದುಕುಳಿದಿದ್ದಾರೆ. ಶ್ರೇಯಸ್ ಪಾವಸ್ಕರ್ ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ. ಬದುಕುಳಿದ ಏಳು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕೊಂಡೊಯ್ಯುತ್ತಿದ್ದುದೇ ದುರಂತ ಸಂಭವಿಸಲು ಕಾರಣ ಎಂದು ಹೇಳಲಾಗುತ್ತಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ ದೋಣಿಯಲ್ಲಿ 30ಕ್ಕೂ ಅಧಿಕ ಮಂದಿ ಇದ್ದು, ಸಾವನ್ನಪ್ಪಿದವರ ಸಂಖ್ಯೆ 15ಕ್ಕೂ ಅಧಿಕ ಎಂದು ಶಂಕಿಸಲಾಗಿದೆ.. ಇನ್ನಷ್ಟೇ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ದೋಣಿ ದುರಂತ ಸಚಿವ ದೇಶಪಾಂಡೆ ದಿಗ್ಭ್ರಮೆ:

ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ ಎಂಟು ಜನರ ಸಾವಿಗೀಡಾಗಿರುವ ದುರಂತಕ್ಕೆ ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا