Urdu   /   English   /   Nawayathi

ನಿಸರ್ಗ ವಿಸ್ಮಯ, ನದಿ ಮಧ್ಯೆ ಸೃಷ್ಟಿಯಾಯ್ತು ತಿರುಗುವ ಹಿಮತಟ್ಟೆ..!

share with us

ಮಿಚಿಗನ್(ಅಮೆರಿಕ): 21 ಜನುವರಿ (ಫಿಕ್ರೋಖಬರ್ ಸುದ್ದಿ) ನಮ್ಮ ಪ್ರಕೃತಿ ವಿಸ್ಮಯ. ನಿಸರ್ಗದ ಒಡಲು ಅನೇಕ ಅಚ್ಚರಿಗಳ ಕಡಲು. ಆಗಾಗ ಇಂಥ ಅದ್ಭುತಗಳು ಗೋಚರಿಸಿ ವಿಶ್ವವನ್ನು ಬೆರಗುಗೊಳಿಸುತ್ತವೆ. ಅಮೆರಿಕದ ಮಿಚಿಗನ್ ಪ್ರಾಂತ್ಯದ ಮೈನ್ ರಾಜ್ಯದ ವೆಸ್ಟ್‍ಬ್ರೂಕ್ ನಗರದಲ್ಲಿ£ ಪ್ರೆಸ್ಯೂಮ್‍ಸ್ಕೋಟ್ ನದಿಯ ಮಧ್ಯೆ 100 ಗಜಗಳಷ್ಟು ಅಗಲದ ಹಿಮದ ತಟ್ಟೆಯೊಂದು ರೂಪುಗೊಂಡು ನಿಧಾನವಾಗಿ ಪ್ರದಕ್ಷಿಣೆ ಹಾಕುತ್ತಿರುವುದು ನೋಡುಗರನ್ನು ಚಕಿತಗೊಳಿಸಿದೆ. ನದಿ ನೀರಿನಲ್ಲಿ ತಾಪಮಾನದ ಪರಿವರ್ತನೆಯಿಂದಾಗಿ ತಳಭಾಗದಲ್ಲಿ ಸುಳಿಗಳು ರೂಪುಗೊಳ್ಳುತ್ತಿರುವುದರಿಂದ ಹಿಮದ ತಟ್ಟೆಗಳು (ಐಸ್ ಡಿಸ್ಕ್‍ಗಳು) ಈ ರೀತಿ ತಿರುಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  ನದಿ ನೀರಿನ ಚಲನೆಯಿಂದ ಹಿಮದ ಗಡ್ಡೆಯ ಅಂಚುಗಳು ಕೊರೆಯಲ್ಪಡುವುದರಿಂದ ಅದು ವೃತ್ತಾಕಾರವನ್ನು ಪಡೆದಿರುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಹೊಳೆಯುವ ಚಂದ್ರನಂತೆ ಭಾಸಗವಾಗುವ ಈ ತಿರುಗುವ ತಟ್ಟೆಯಲ್ಲಿ ಬಾತುಕೋಳಿಗಳು ಮತ್ತಿತರ ಪಕ್ಷಿಗಳು ಆಶ್ರಯ ಪಡೆಯುತ್ತಿವೆ. ಸ್ಥಳೀಯ ಉದ್ಯಮಿಯೊಬ್ಬರು ಪ್ರೆಸ್ಯೂಮ್‍ಸ್ಕೋಟ್ ನದಿಯಲ್ಲಿ ಐಸ್ ಡಿಸ್ಕ್ ರೂಪುಗೊಂಡಿರುವುದನ್ನು ಗುರುತಿಸಿದ್ದರು. ಡ್ರೋಣ್ ಬಳಸಿ ಅವರು ಚಂದ್ರಾಕೃತಿಯ ಹಿಮದ ಗಡ್ಡೆಯ ಫೋಟೋಗಳನ್ನು ಕಿಕ್ಕಿಸಿದ್ದಾರೆ.

Ice-Disk--01

Ice-Disk--03

Ice-Disk--04

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا