Urdu   /   English   /   Nawayathi

ರೇಪ್‌ ಕೇಸ್‌ ಹಿಂಪಡೆಯದ Bar dancer, ಗುಂಡಿಕ್ಕಿ ಕೊಂದ Bouncer

share with us

ಗುರುಗ್ರಾಮ: 19 ಜನುವರಿ (ಫಿಕ್ರೋಖಬರ್ ಸುದ್ದಿ) ತನ್ನ ವಿರುದ್ಧದ ರೇಪ್‌ ಕೇಸನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿದ 22ರ ಹರೆಯದ ಯುವತಿಯನ್ನು  ಡ್ಯಾನ್ಸಿಂಗ್‌ ಬಾರ್‌ ಬೌನ್ಸರ್‌ ಸಂದೀಪ್‌ ಕುಮಾರ್‌ ಎಂಬಾತನು ಗುಂಡಿಕ್ಕಿ ಕೊಂದಿರುವುದಾಗಿ ಗುರುಗ್ರಾಮದ ಎಸಿಪಿ ಶಂಶೇರ್‌ ಸಿಂಗ್‌ ತಿಳಿಸಿದ್ದಾರೆ. ಮಹಿಳೆಯ ಶವವು ಇಂದು ನಸುಕಿನ 6.30ರ ವೇಳೆಗೆ ಡಿಎಲ್‌ಎಫ್ ಮೊದಲ ಹಂತದ ಖುಷ್‌ಬೂ ಚೌಕ್‌ ಸಮಿಪ ಪತ್ತೆಯಾಗಿದೆ. ಹತ್ಯೆಗೀಡಾದ ಮಹಿಳೆಯು ವೃತ್ತಿಯಲ್ಲಿ ಬಾರ್‌ ಡ್ಯಾನ್ಸರ್‌. ನೈಟ್‌ ಕ್ಲಬ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾಗ ಮಹಿಳೆಯು ಸಂದೀಪ್‌ ಕುಮಾರ್‌ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ಈ ಸಲುಗೆಯಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. 2017ರ ಮಾರ್ಚ್‌ನಲ್ಲಿ ಆಕೆ ಪೊಲೀಸರಿಗೆ ಆತನ ವಿರುದ್ಧ ಆತ್ಯಾಚಾರದ ದೂರನ್ನು ನೀಡಿದ್ದಳು. ಗುರುಗ್ರಾಮ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಕೋರ್ಟ್‌ ಅನಂತರ ಆತನಿಗೆ ಜಾಮೀನು ಮಂಜೂರು ಮಾಡಿತ್ತು.  ಮಹಿಳೆಯು ಕೋರ್ಟಿನಲ್ಲಿ ತನ್ನ ಹೇಳಿಕೆ ದಾಖಲಿಸಲು ಕೆಲವೇ ತಾಸುಗಳ ಇದ್ದಾಗ ಸಂದೀಪ್‌ ಕುಮಾರ್‌ ಆಕೆಯನ್ನು ಕೊಂದಿದ್ದಾನೆ ಎನ್ನಲಾಗಿದೆ. 

ಮೃತ ಮಹಿಳೆಯ ತಾಯಿ ಹೇಳಿರುವ ಪ್ರಕಾರ ಸಂದೀಪ್‌ ಕುಮಾರ್‌ ಮಹಿಳೆಯನ್ನು ಮನೆಯಿಂದ ಅಪಹರಿಸಿ ಒಯ್ದು ಕೊಂದಿದ್ದಾನೆ. ಸಂದೀಪ್‌ ಆಕೆಯ ಮೇಲೆ ನಾಲ್ಕು ಗುಂಡುಗಳನ್ನು ಎಸೆದಿದ್ದಾನೆ.  ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا