Urdu   /   English   /   Nawayathi

ಅಂಬೆಗಾಲು ನಡಿಗೆಯ ಶಿಕ್ಷೆ

share with us

ಬೀಜಿಂಗ್‌: 19 ಜನುವರಿ (ಫಿಕ್ರೋಖಬರ್ ಸುದ್ದಿ) ಜಗತ್ತಿನ ದೈತ್ಯ ಆರ್ಥಿಕ ಶಕ್ತಿಯಾಗುವ ಕನಸು ಹೊತ್ತ ಚೀನದ ರಣೋತ್ಸಾಹ ಅಲ್ಲಿನ ಕಾರ್ಪೊರೇಟ್‌ ಉದ್ಯೋಗಿಗಳ ಜೀವವನ್ನು ಹೇಗೆ ಹಿಂಡುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ಅಲ್ಲಿನ ಕಂಪೆನಿಯೊಂದು ತಾನು ಸೂಚಿಸಿದ್ದ "ವಾರ್ಷಿಕ ಗುರಿ' (ಇಯರ್‌ ಟಾರ್ಗೆಟ್‌) ಮುಟ್ಟದ ತನ್ನ ಉದ್ಯೋಗಿಗಳಿಗೆ ರಸ್ತೆಯ ಮೇಲೆ ಅಂಬೆಗಾಲಿಟ್ಟು ನಡೆಯುವ ಶಿಕ್ಷೆಯನ್ನು ನೀಡಿದೆ. ಇದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದ್ದು, ಅನೇಕರ ಟೀಕೆಗಳಿಗೂ ಕಾರಣವಾಗಿದೆ. "ನೌಕರರ ಘನತೆಗೆ ಕುಂದು ತಂದಿರುವ ಈ ಕಂಪನಿಯನ್ನು ಮುಚ್ಚಬೇಕು' ಎಂದು ಹಲವರು ಕಿಡಿಕಾರಿದ್ದರೆ, ಇನ್ನೂ ಕೆಲವರು, "ಹಣದ ಮುಂದೆ ಆತ್ಮಾಭಿಮಾನವೂ ಮಣ್ಣಾಯಿತೇ' ಎಂದು ಪ್ರಶ್ನಿಸಿದ್ದಾರೆ. ಆದರೆ, ಚೀನದಲ್ಲಿ ಇದೆಲ್ಲ ಮಾಮೂಲು  ಕೆಲ ಮಾಧ್ಯಮಗಳಲ್ಲಿನ ವರದಿಗಳು. ಕಳೆದ ವರ್ಷ ಚೀನದಲ್ಲಿ   ಗುರಿ ತಲುಪದ ಉದ್ಯೋಗಿಗಳಿಗೆ ಕಂಪೆನಿಯೊಂದರ ಅಧಿಕಾರಿಗಳು ಕಪಾಳಮೋಕ್ಷ ಮಾಡಿದ್ದ ವಿಡಿಯೋವೊಂದು ವೈರಲ್‌ ಆಗಿದ್ದನ್ನು ವರದಿಗಳಲ್ಲಿ ಉಲ್ಲೇಖೀಸಲಾಗಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا