Urdu   /   English   /   Nawayathi

ಹೆಬಳೆ ಗ್ರಾಮದಲ್ಲಿ ಗುಜರಿ ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿ 

share with us

ಭಟ್ಕಳ: 17 ಜನುವರಿ (ಫಿಕ್ರೋಖಬರ್ ಸುದ್ದಿ) ಬುಧವಾರದಂದು ಭಟ್ಕಳದ ಹೆಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನು ಕೆಲವು ಮನೆಗಳಿಂದ ಅಕ್ರಮವಾಗಿ ಪಡಿತರ ಚೀಟಿಯಲ್ಲಿ ದೊರಕಿದ ಅಕ್ಕಿಯನ್ನು ಸಂಗ್ರಹಿಸಿ ಲಗೇಜು ರಿಕ್ಷಾವೊಂದರಲ್ಲಿ ಸಾಗಿಸುತ್ತಿದ್ದ ವೇಳೆ ತಾಲೂಕಿನ ಆಹಾರ ಇಲಾಖೆಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ದಾಳಿ ನಡೆಸಿ ರಿಕ್ಷಾ ಹಾಗೂ ಸುಮಾರು ಏಳು ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವ್ಯಕ್ತಿ ಗುಜರಿ ವಸ್ತುಗಳನ್ನು ಪಡೆಯುವ ನೆಪದಲ್ಲಿ ಮನೆಗಳಿಂದ ಹೆಚ್ಚು ಹಣ ಕೊಟ್ಟು ಅಕ್ಕಿಯನ್ನು ಸಂಗ್ರಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಕೊಟ್ಟ ಮಾಹಿತಿಯೊಂದಿಗೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಹಿಡಿಯಲು ಯತ್ನಿಸುವ ವೇಳೆ ಆರೋಪಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಸಾರ್ವಜನಿಕರಿಗೆ ಅನುಮಾನ ಬರಬಾರದೆಂದು ಕೆಲವೊಂದು ಗುಜರಿ ವಸ್ತುಗಳನ್ನು ಜೊತೆಗೆ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ವಾಹನವನ್ನು ತಹಸೀಲ್ದಾರರ ಕಚೇರಿಯಲ್ಲಿ ನಿಲ್ಲಿಸಲಾಗಿದ್ದು, ಅಕ್ಕಿಯನ್ನು ಗೋದಾಮಿಗೆ ಸಾಗಿಸಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا