Urdu   /   English   /   Nawayathi

ನಾಳೆ ಸಂಜೆಯೊಳಗೆ ನೂರು ಕೋಟಿ ಕಟ್ಟದಿದ್ರೆ ಪೋಕ್ಸ್​​ವೇಗನ್​​ ಮುಖ್ಯಸ್ಥನ ಬಂಧನ

share with us

ನವದೆಹಲಿ: 17 ಜನುವರಿ (ಫಿಕ್ರೋಖಬರ್ ಸುದ್ದಿ) ಜರ್ಮನ್ ಮೂಲದ ಕಾರು ತಯಾರಿಕಾ ಸಂಸ್ಥೆ ಪೋಕ್ಸ್​​ವೇಗನ್​​ ಸಂಸ್ಥೆ ಶುಕ್ರವಾರ ಸಂಜೆ ಐದರೊಳಗೆ ನೂರು ಕೋಟಿ ರೂಪಾಯಿ ದಂಡವನ್ನು ತೆರಬೇಕು, ಇಲ್ಲವಾದಲ್ಲಿ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥನನ್ನು ಬಂಧಿಸಿ ಆತನ ಆಸ್ತಿ ಜಪ್ತಿ ಮಾಡಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಖಡಕ್​ ಎಚ್ಚರಿಕೆ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಾಲ್ಕು ಸದಸ್ಯರ ಪೀಠವನ್ನು​ ಕಳೆದ ನವೆಂಬರ್​​ನಲ್ಲಿ ರಚನೆ ಮಾಡಲಾಗಿತ್ತು. ಈ ಸಮಿತಿ ಪೋಕ್ಸ್​​ವೇಗನ್ ಡೀಸೆಲ್​ ಕಾರ್​ನಲ್ಲಿ ನಡೆದಿದ್ದ ಹಗರಣದ ವರದಿಯನ್ನು ಸಲ್ಲಿಸಿತ್ತು. 
ಏನಿದು ಹಗರಣ..?
ಪೋಕ್ಸ್​​ವೇಗನ್​ ಸಂಸ್ಥೆ ತನ್ನ ಭಾರತದಲ್ಲಿನ ಡೀಸೆಲ್ ಕಾರ್​ನಲ್ಲಿ ಬಳಸಿದ್ದ ಸಾಧನವೊಂದು ಅತಿಹೆಚ್ಚು ವಾಯುಮಾಲಿನ್ಯ ಉಂಟು ಮಾಡುತ್ತಿತ್ತು. ಇದು ಸಾಮಾನ್ಯ ಕಾರೊಂದರ ಮಾಲಿನ್ಯಕ್ಕಿಂತ ದುಪ್ಪಟ್ಟಾಗಿತ್ತು ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا