Urdu   /   English   /   Nawayathi

ಮಧ್ಯ ಪ್ರದೇಶ ಡೆಪ್ಯೂಟಿ ಸ್ಪೀಕರ್ ಎಸ್ಕಾರ್ಟ್ ಅಪಘಾತ: 3 ಪೊಲೀಸರು, ಚಾಲಕ ಸಾವು

share with us

ಬಲಘಾಟ್: 14 ಜನುವರಿ (ಫಿಕ್ರೋಖಬರ್ ಸುದ್ದಿ) ಮಧ್ಯ ಪ್ರದೇಶ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಎಸ್ಕಾರ್ಟ್ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಪೊಲೀಸರು ಹಾಗೂ ಎಸ್ಕಾರ್ಟ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಬಲಘಾಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಕಾರ್ಟ್ ವಾಹನದಲ್ಲಿದ್ದ ಓರ್ವ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯದೇವ್ ಅವರು ಹೇಳಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಡೆಪ್ಯೂಟಿ ಸ್ಪೀಕರ್ ಹೀನಾ ಕನ್ವರೆ ಅವರು ತಮ್ಮ ಕ್ಷೇತ್ರ ಲಂಜಿಹಿ ನಿಂದ ವಾಪಸ್ ಬರುತ್ತಿದ್ದಾಗ ಈ ಅಪಘಾತ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಎದುರಗಡೆಯಿಂದ ಬರುತ್ತಿದ್ದ ಲಾರಿ ನೇರವಾಗಿ ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಬರುತ್ತಿದ್ದ ಕಾಂಗ್ರೆಸ್ ನ ಡೆಪ್ಯೂಟಿ ಸ್ಪೀಕರ್ ಕಾರಿನ ಚಾಲಕ ಕಾರನ್ನು ರಸ್ತೆಯಿಂದ ಹೊಲಕ್ಕೆ ಇಳಿಸಿದ್ದು, ಅದೃಷ್ಟವಶಾತ್ ಕನ್ವರೆ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೃತರನ್ನು ಸಬ್ ಇನ್ಸ್ ಪೆಕ್ಟರ್ ಹರ್ಷವರ್ಧನ್ ಸೊಲಂಕಿ(30), ಮುಖ್ಯ ಪೇದೆ ಹಮಿದ್ ಶೇಖ್(50), ಪೊಲೀಸ್ ಪೇದೆ ರಾಹುಲ್ ಕೋಲರೆ(26) ಹಾಗೂ ಚಾಲಕ ಸಚಿನ್(22) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಪೊಲೀಸ್ ಪೇದೆಯನ್ನು ಮಹಾರಾಷ್ಟ್ರದ ನಾಗಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا