Urdu   /   English   /   Nawayathi

26/11 ಮುಂಬೈ ದಾಳಿ ಸಂಚುಕೋರ ತಹಾವ್ವುರ್ ರಾಣ ಭಾರತದ ವಶಕ್ಕೆ?

share with us

ನವದೆಹಲಿ: 14 ಜನುವರಿ (ಫಿಕ್ರೋಖಬರ್ ಸುದ್ದಿ) 26/11 ಮುಂಬೈ ದಾಳಿಯ ಸಂಚಿಗೆ ಸಂಬಂಧಿಸಿದಂತೆ  ಅಮೆರಿಕಾದಿಂದ 14 ವರ್ಷ ಜೈಲು ಶಿಕ್ಷೆಗೊಳಗಾಗಿರುವ ತಹಾವ್ವುರ್  ಹುಸೈನ್ ರಾಣ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಪಾಕಿಸ್ತಾನ- ಕೆನಡಾ ಪ್ರಜೆಯಾಗಿರುವ ರಾಣ ಜೈಲು ಶಿಕ್ಷೆ ಡಿಸೆಂಬರ್ 2021ರಲ್ಲಿ ಅಂತ್ಯಗೊಳ್ಳಲಿದೆ. ಅದಕ್ಕೂ ಮುಂಚಿತವಾಗಿ ಆತನನ್ನು ಭಾರತಕ್ಕೆ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಗತ್ಯ ಕಾಗದ ಪತ್ರಗಳ ಕಾರ್ಯ ಪೂರ್ಣಗೊಂಡಿದ್ದು, ಅಮೆರಿಕಾದ ಟ್ರಂಪ್ ಆಡಳಿತ ಭಾರತ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂಬೈ ದಾಳಿ ಆರೋಪದ ಹಿನ್ನೆಲೆಯಲ್ಲಿ  2009ರಲ್ಲಿ ತಹಾವ್ವುರ್ ರಾಣಾನನ್ನು ಬಂಧಿಸಲಾಗಿತ್ತು. ಪಾಕಿಸ್ತಾನ ಮೂಲದ ಲಷ್ಕರ್ ಇ -ತೊಯ್ಬಾ ಸಂಘಟನೆ ನಡೆಸಿದ ದಾಳಿಯಿಂದ ಅಮೆರಿಕಾದ ನಾಗರಿಕರು ಸೇರಿದಂತೆ  ಸುಮಾರು 166 ಮಂದಿ ಮೃತಪಟ್ಟಿದ್ದರು. 9 ಮಂದಿ ಭಯೋತ್ಪಾದಕರನ್ನು ಪೊಲೀಸರು ಹತ್ಯೆಗೈದಿದ್ದರು.  ಉಗ್ರ ಕಸಬ್ ನನ್ನು ನೇಣಿಗೇರಿಸಲಾಗಿದೆ. 2013ರಲ್ಲಿ ರಾಣಾನಿಗೆ 14 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿತ್ತು. ಆದಾಗ್ಯೂ, ಡಿಸೆಂಬರ್ 2021ರಲ್ಲಿ ಆತನನ್ನು ಬಿಡುಗಡೆ ಮಾಡಲು ಸಿದ್ದತೆ  ನಡೆಸಲಾಗಿದೆ ಎಂಬುದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ತಹಾವ್ವುರ್ ರಾಣಾ ಜೈಲು ಶಿಕ್ಷೆ ಪೂರ್ಣಗೊಂಡ ನಂತರ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಅಮೆರಿಕಾ- ಭಾರತ ಕಾರ್ಯೋನ್ಮುಖವಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಸಂಬಂಧ ಅಮೆರಿಕಾ ರಾಜ್ಯ ಇಲಾಖೆ ಹಾಗೂ ನ್ಯಾಯ ಇಲಾಖೆಗಳು  ಭಾರತದ ವಿದೇಶಾಂಗ, ಗೃಹ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯಗಳು ಪ್ರಕ್ರಿಯೆಯಲ್ಲಿ ತೊಡಗಿವೆ ಎಂಬುದು ತಿಳಿದುಬಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا