Urdu   /   English   /   Nawayathi

ದುಬೈನಲ್ಲಿ ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸಲು ಪೇಚಾಡಿದ್ರಾ ರಾಹುಲ್ ಗಾಂಧಿ?

share with us

ದುಬೈ: 14 ಜನುವರಿ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದುಬೈ ಪ್ರವಾಸದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಈ ವೇಳೆ 14 ವರ್ಷದ ಬಾಲಕಿಯೋರ್ವಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೇಚಾಡಿದ್ದರು ಎಂದು ವರದಿಯಾಗಿದೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತಮ್ಮ ಕಲ್ಪನೆಯ ಭಾರತದ ಕುರಿತು ಮಾತನಾಡಿದ್ದರು. ಜಾತಿ ನಿರ್ಮೂಲನೆ, ಜಾತ್ಯಾತೀತತೆ ಬಗ್ಗೆ ಮಾತನಾಡುವ ವೇಳೆ ಬಾಲಕಿಯೊರ್ವಳು ರಾಹುಲ್ ಗಾಂಧಿಗೆ ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನ ಸುತ್ತಿದ್ದು ಮತ್ತು ಕಾಶ್ಮೀರ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದು ಸರಿಯೇ ಎಂದು ಪ್ರಶ್ನಿಸಿದ್ದಳು. ಇದಕ್ಕೆ ರಾಹುಲ್ ಗಾಂಧ ತಾವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವುದಾಗಿ ಹೇಳಿದ್ದಾರೆ. ಅಲ್ಲದೆ ಇದೇ ಸದ್ಯ ಭಾರತಕ್ಕೆ ಅವಶ್ಯ ಎಂದು ತಮ್ಮನ್ನು ಸಮರ್ಥಿಸಿಕೊಂಡರು. ನಂತರ ಬಾಲಕಿ, ದೇಶವನ್ನು ದೀರ್ಘ ಅವಧಿಗೆ ಆಳಿದ ಕಾಂಗ್ರೆಸ್ ಈ ಕುರಿತು ಹೆಮ್ಮೆ ಪಡುತ್ತದೆ. ಆದರೆ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಇಂದಿಗೂ ಹಾಗೆ ಇರಲು ಕಾರಣವೇನು ಎಂದು ಪ್ರಶ್ನಿಸಿದ್ದಾಳೆ. 

ಈ ಪ್ರಶ್ನೆಯಿಂದ ತಬ್ಬಿಬ್ಬಾದ ರಾಹುಲ್, ಏನು ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಮುಂದುವರೆದು ಬಾಲಕಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಭಾರತದ ವರ್ಚಸ್ಸು ವಿಶ್ವದಲ್ಲಿ ಹೆಚ್ಚಿರುವುದು ಸುಳ್ಳಲ್ಲ ಎಂದು ಹೇಳಿದ್ದಾಳೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا