Urdu   /   English   /   Nawayathi

ಗೋಕರ್ಣದಲ್ಲಿ ವಿದೇಶಿಗರ ರಂಪಾಟ... ಮಾದಕ ದ್ರವ್ಯ ಸೇವಿಸಿ ಹುಚ್ಚಾಟ

share with us

ಕಾರವಾರ: 13 ಜನುವರಿ (ಫಿಕ್ರೋಖಬರ್ ಸುದ್ದಿ) ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದು ಕಂಠಪೂರ್ತಿ ಕುಡಿದು ಇಲ್ಲವೇ ಮಾದಕ ದ್ರವ್ಯಗಳನ್ನು ಸೇವಿಸಿ ರಂಪಾಟ ಮಾಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳಿಂದ ಗೋಕರ್ಣದಲ್ಲಿ ಬೀಡುಬಿಟ್ಟಿದ್ದ ಅಮೆರಿಕ ಮೂಲದ ಡೇವಿಡ್ ಸ್ಟಿಪನ್ ಎಂಬಾತ ಕಂಠಪೂರ್ತಿ ಕುಡಿದಿದ್ದಲ್ಲದೆ ಕುಡ್ಲೆಬೀಚ್ ನಲ್ಲಿ ರಂಪಾಟ ನಡೆಸಿರುವ ಘಟನೆ ಇಂದು ನಡೆದಿದೆ. ಮೊದಲೇ ಈತ ಹೊಟೆಲ್​​​ಗಳಲ್ಲಿ ಗಲಾಟೆ ಮಾಡಿಕೊಂಡಿದ್ದಲ್ಲದೇ, ಅಲ್ಲಿಗೆ ಬಂದ ಪ್ರವಾಸಿಗರೊಂದಿಗೆ ಜಗಳಕ್ಕಿಳಿದಿದ್ದ. ಆದರೆ ಇವನ ಗಲಾಟೆ ಬಗ್ಗೆ ತಿಳಿದ ಪೊಲೀಸರು ತಕ್ಷಣ ಆಗಮಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆತನಿಗೆ ಎಚ್ಚರಿಕೆ ನೀಡಿ ಗೋವಾಕ್ಕೆ ಕಳುಹಿಸಿದ್ದಾರೆ. ಇನ್ನು ಇದೇ ರೀತಿ ಕಳೆದ ಎರಡು ದಿನಗಳ ಹಿಂದೆ ಮಾದಕ ದೃವ್ಯ ಸೇವಿಸಿದ್ದ ಜರ್ಮನ್​ ದೇಶದ ಪ್ರಜೆವೋರ್ವ ಅಂಗಡಿಯೊಂದಕ್ಕೆ ನುಗ್ಗಿ ಸಾಮಗ್ರಿಗಳನ್ನು ಹಾಳು ಮಾಡಿದ್ದ. ಅಲ್ಲದೆ ಆತನನ್ನು ತಡೆಯಲು ಬಂದ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆತನನ್ನು ಹಿಡಿಯಲು ಹರಸಾಹಸ ಪಟ್ಟ ಸ್ಥಳೀಯರು, ಕೊನೆಗೂ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ ಜರ್ಮನ್​ ಪ್ರಜೆ ಠಾಣೆಯಲ್ಲಿ ಪೊಲೀಸರೊಂದಿಗೂ ರಂಪಾಟ ನಡೆಸಿದ್ದ. ಕೊನೆಗೆ ಬೆಳಗ್ಗೆ ಆತನ ತಂದೆಯೊಂದಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 

ಹೀಗೆ ಪ್ರವಾಸಕ್ಕೆಂದು ಬರುವ ವಿದೇಶಿ ಪ್ರವಾಸಿಗರು ಮಾದಕ ವ್ಯಸನದಿಂದಾಗಿ ರಂಪಾಟ ನಡೆಸುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಇಂತವರ ಮೇಲೆ ನಿಗಾ ಇಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا