Urdu   /   English   /   Nawayathi

ಹಣ ವಸೂಲಿ ಮಾಡಿದ ಶಾಲೆಗೆ ಬೆಂಕಿ.. ಮಾಲೀಕಳಿಗೆ ಗೂಸಾ

share with us

ಸಹರ್ಸಾ(ಬಿಹಾರ): 13 ಜನುವರಿ (ಫಿಕ್ರೋಖಬರ್ ಸುದ್ದಿ) ಪೋಷಕರಿಂದ ವಸೂಲಿ ಮಾಡಿದ್ದ ಹೆಚ್ಚುವರಿ ಶಾಲಾ ಶುಲ್ಕವನ್ನು ವಾಪಸ್​ ಕೊಡುವಂತೆ ಇಟ್ಟ ಬೇಡಿಕೆಗೆ ಒಪ್ಪದ ಖಾಸಗಿ ಶಾಲಾ ಮಾಲೀಕಳಿಗೆ ರೊಚ್ಚಿಗೆದ್ದ ಪೋಷಕರು ಗೂಸಾ ಕೊಟ್ಟಿದ್ದಾರೆ.  ಬಿಹಾರದ ಸಹರ್ಸಾದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಆಡಳಿತ ಮಂಡಳಿ ವಿರುದ್ಧ ತಿರುಗಿಬಿದ್ದ ಕೆಲವರು ಶಾಲೆಯ ಕೊಠಡಿಗಳಿಗೆ ಬೆಂಕಿ ಕೂಡ ಇಟ್ಟಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಹಲ್ಲೆಗೊಳಗಾದ ಶಾಲಾ ಮಾಲೀಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಲಾಗಿರುವ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

Embedded video

ANI✔@ANI

: A group of men assault a private school owner & fire at the school building yesterday, after she refused to pay extortion money ; ASI Saharsa, Bihar says,' Further investigation is underway, arrests will be made.' (Source: CCTV)

289

11:35 AM - Jan 13, 2019

220 people are talking about this

Twitter Ads info and privacy

ಶಾಲೆ ಗೇಟ್​ ತೆರೆದು ಒಳ ನುಗ್ಗುವ ಪೋಷಕರು ಶಾಲೆ ಮಾಲೀಕಳನ್ನು ತಳ್ಳಿ ಕೆಳಗೆ ಬೀಳಿಸಿ ಬೆಲ್ಟ್​ನಿಂದ ಬಾರಿಸಿದ್ದಾರೆ. ಪದೇ ಪದೆ ಆಕೆಯನ್ನು ನೂಕಾಡಲಾಗಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا