Urdu   /   English   /   Nawayathi

ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್‌

share with us

ಬೆಂಗಳೂರು: 12 ಜನುವರಿ (ಫಿಕ್ರೋಖಬರ್ ಸುದ್ದಿ) ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹವಣಿಸುತ್ತಿರುವ ಪಾಕಿಸ್ತಾನದ ಉಗ್ರ ಸಂಘಟನೆಗಳು, ಉಗ್ರ ಪಡೆಯನ್ನು ದೇಶದೊಳಕ್ಕೆ ನುಗ್ಗಿಸಲು ಸಮುಂದರಿ ಜಿಹಾದ್‌ ಮೂಲಕ  ಈ ಬಾರಿ ರಾಜ್ಯದ ಕರಾವಳಿ ತೀರ ಪ್ರದೇಶವನ್ನು ಟಾರ್ಗೆಟ್‌ ಮಾಡಿಕೊಂಡಿವೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 2008ರ ಮುಂಬೈ ದಾಳಿ ಬಳಿಕ  ಭಾರತದೊಳಕ್ಕೆ ಉಗ್ರಪಡೆ ನುಗ್ಗಿಸಲು ಸಮುದ್ರ ಮಾರ್ಗವೇ ಸುಲಭ ದಾರಿ ಎಂಬ ಲೆಕ್ಕಾಚಾರ ಹಾಕಿರುವ ಪಾಕ್‌ ಉಗ್ರ ಸಂಘಟನೆಗಳು, ಈ ಆಪರೇಷನ್‌ಗಾಗಿಯೇ ಸಮುದ್ರದ ಆಳದಲ್ಲಿಯೂ ಈಜಬಲ್ಲ ಉಗ್ರರನ್ನು ತರಬೇತಿಗೊಳಿಸಿದ್ದು, ಇದೀಗ ಕಾರ್ಯಾಚರಣೆ ರೂಪಕ್ಕಿಳಿಸಿದೆ. ಈ ಆಪರೇಶನ್‌ ಭಾಗವಾಗಿ 10ರಿಂದ -15 ಜನರಿರುವ ಉಗ್ರರ ಗುಂಪು ಈಗಾಗಲೇ ಪಾಕ್‌ ತೊರೆದಿದೆ. ಈ ಬಾರಿ ಕರ್ನಾಟಕ ಕರಾವಳಿ ತೀರದ ಮುಖೇನ ದೇಶದೊಳಕ್ಕೆ ಬರುವ ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಗುಪ್ತಚರ ದಳ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ರವಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ 320 ಕಿ.ಮೀ ವ್ಯಾಪ್ತಿಯ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ನೌಕಾದಳ ಹಾಗೂ ಕರಾವಳಿ ತೀರ ಪೊಲೀಸ್‌ ಪಡೆಗಳಿಗೆ ಸ್ಪಷ್ಟ ಸೂಚನೆ ರವಾನಿಸಲಾಗಿದೆ. ಹೀಗಾಗಿ ತೀರಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಣೆಯಾಗಿದ್ದು ಕಣ್ಗಾವಲು ಹೆಚ್ಚಿಸಲಾಗಿದೆ.

ಪಾಕಿಸ್ತಾನದ  ಲಷ್ಕರ್‌-ಎ- ತೊಯಬಾ (ಎಲ್‌ಇಟಿ), ಜೈಶ್‌- ಎ- ಮೊಹಮದ್‌, ( ಜೆಎಎಂ) ಫ‌ಲಾಯಿ ಇನ್ಸಾಯಿತ್‌ ಮೊಹಮದ್‌ ಉಗ್ರ ಸಂಘಟನೆಗಳು ಈ ಸಂಚು ರೂಪಿಸಿರುವ ಶಂಕೆಯಿದೆ. ಜನವರಿ 26 ಮುನ್ನಾದಿನಗಳಲ್ಲಿಯೇ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವ ಮಾಹಿತಿಯಿದೆ. ಹೀಗಾಗಿ ಬಿಗಿ ಕಣ್ಗಾವಲು ಇಡುವಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ದೊಡ್ಡಪ್ರಮಾಣದ ವಿಧ್ವಂಸಕ ಕೃತ್ಯ ನಡೆಸುವ ಸಲುವಾಗಿ ಸಮುದ್ರಮಾರ್ಗದ ಮುಖೇನ ಉಗ್ರರನ್ನು ಕಳುಹಿಸುವ ಮುನ್ನ ಎಲ್‌ಇಟಿ ಹಾಗೂ ಜೆಎಎಂ ಎರಡೂ ಸಂಘಟನೆಗಳು, ಉಗ್ರರಿಗೆ ಫೈಸಲಬಾದ್‌, ಲಾಹೋರ್‌ ಸೇರಿದಂತೆ ಹಲವು ಭಾಗಗಳಲ್ಲಿ ತಿಂಗಳಾನುಗಟ್ಟಲೆ ತರಬೇತಿ ನೀಡಿವೆ. ಸಮುದ್ರದ ಆಳದಲ್ಲಿ ಈಜುವ, ಭಾರತದ ನೌಕಾದಳದ ಕಣ್‌ತಪ್ಪಿಸಿ ನುಗ್ಗಲು ತರಬೇತಿ ನೀಡಲಾಗಿದೆ. ದೂರದ ಸಮುದ್ರ ಪ್ರವೇಶಿಸುವ ಒಳನುಗ್ಗುವ ಉಗ್ರರು ಮೀನುಗಾರರ ಹಡಗು ಹಾಗೂ ಆಯಿಲ್‌ ಟ್ಯಾಂಕರ್‌ಗಳನ್ನು ಹೊಡೆದುರುಳಿಸಿ ಅವುಗಳನ್ನು ಹೈಜಾಕ್‌ ಮಾಡಿಕೊಂಡು ತೀರದ ಮುಖೇನ ದೇಶಕ್ಕೆ ನುಗ್ಗುವುದು,. ತೀರ ಪ್ರವೇಶಿಸಿ ಆತ್ಮಾಹುತಿ ದಾಳಿ ನಡೆಸುವ ಸಂಚು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ತೀರ ಏಕೆ ಟಾರ್ಗೆಟ್‌?
ದೇಶದ 7,517 ಕಿ. ಮೀ ಕಡಲ ತೀರ ಪ್ರದೇಶವಿದ್ದು, ರಾಜ್ಯದ ಕರಾವಳಿ ತೀರ 320 ಕೀ.ಮೀ ವ್ಯಾಪ್ತಿಯಿದ್ದು, ಕೇರಳ ಕರಾವಳಿಗೆ ಹೊಂದಿಕೊಂಡಿದೆ. ಹಲವು ಉಗ್ರರ ಸ್ಲಿàಪರ್‌ ಸೆಲ್‌ಗ‌ಳಿಗೆ ಪ್ರಮುಖ ಸ್ಥಾನವಾಗಿದೆ. ಹೀಗಾಗಿ, ಕರಾವಳಿ ತೀರ ಪ್ರವೇಶಿಸಿದರೆ ದಾಳಿಗೂ ಮುನ್ನ ಸ್ಲಿàಪರ್‌ ಸೆಲ್‌ ಸ್ಥಾಪನೆ ಹಾಗೂ ಪುನರ್‌ ತರಬೇತಿಗೂ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ರಾಜ್ಯದ ಕಡಲ ತೀರದ ಮೇಲೆ ಉಗ್ರ ಸಂಘಟನೆಗಳು ಕಣ್ಣಿಟ್ಟಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಸುವರ್ಣ ತ್ರಿಭುಜ ಬೋಟ್‌ ಹೈಜಾಕ್‌? 
ಪಾಕ್‌ ಉಗ್ರರು ಸಮುದ್ರಮಾರ್ಗವಾಗಿ ದೇಶಕ್ಕೆ ಬರಲಿದ್ದಾರೆ ಎಂಬ ಸುಳಿವು ಗುಪ್ತಚರ ಇಲಾಖೆಗೆ ಖಚಿತವಾದ ಕೆಲವೇ ದಿನಗಳಲ್ಲಿ ಮಲ್ಪೆ ತೀರದ ಎಂಟು ಮೀನುಗಾರರಿದ್ದ ಬೋಟ್‌ ನಾಪತ್ತೆಯಾಗಿರುವುದು ಕೇಂದ್ರಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದುವರೆಗೂ ಬೋಟ್‌ನ ಅವಶೇಷಗಳಾಗಲಿ, ಕುರುಹುಗಳಾಗಲಿ ಎಲ್ಲಿಯೂ ಕಂಡು ಬಂದಿಲ್ಲದಿರುವುದರಿಂದ ಬೋಟ್‌ ಹೈಜಾಕ್‌ ಶಂಕೆ ಬಲವಾಗಿದೆ. ಹೀಗಾಗಿ, ಕೇಂದ್ರ ಗೃಹಸಚಿವಾಲಯ ಬೋಟ್‌ ಪತ್ತೆಕಾರ್ಯದ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಜತೆಗೆ, ನೌಕಾದಳ,ಗೋವಾ, ಮಹಾರಾಷ್ಟ್ರ, ಗುಜರಾತ್‌ ಸೇರಿ ನೆರೆರಾಜ್ಯಗಳ ತೀರಪ್ರದೇಶಗಳ ಪೊಲೀಸ್‌ ಪಡೆಗಳಿಗೆ ಹೆಚ್ಚಿನ ಕಣ್ಗಾವಲು ಇರಿಸಿ ಭದ್ರತೆ ಹೆಚ್ಚಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا