Urdu   /   English   /   Nawayathi

ರಾಹುಲ್‌ ವಿರುದ್ಧ 100 ಕೋಟಿ ವಂಚನೆ ಆರೋಪ

share with us

ಹೊಸದಿಲ್ಲಿ: 10 ಜನುವರಿ (ಫಿಕ್ರೋಖಬರ್ ಸುದ್ದಿ) ನ್ಯಾಷನಲ್‌ ಹೆರಾಲ್ಡ್‌ ವಿಚಾರದಲ್ಲಿ 2011-12 ರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ 100 ಕೋಟಿ ರೂ. ಗೂ ಹೆಚ್ಚು ಮೊತ್ತದ ತೆರಿಗೆ ತಪ್ಪಿಸಿದ್ದಾರೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ಕೂಡ ನೀಡಿದೆ. 2011-12ರಲ್ಲಿ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ ಸಂಬಂಧಿಸಿದ ಆದಾಯನ್ನು ಮರುಪರಿಶೀಲನೆ ಮಾಡುವಾಗ ಈ ಅಂಶ ಬೆಳಕಿಗೆ ಬಂದಿದೆ. ರಾಹುಲ್‌ ಗಾಂಧಿ ಆ ವರ್ಷ ತನ್ನ ಆದಾಯವನ್ನು ಕೇವಲ 68.12 ಲಕ್ಷ ರೂ. ಹಾಗೂ ಕಾಂಗ್ರೆಸ್‌ ಮುಖಂಡ ಆಸ್ಕರ್‌ ಫ‌ರ್ನಾಂಡಿಸ್‌ 48.93 ಕೋಟಿ ರೂ. ಎಂದು ಘೋಷಿಸಿದ್ದರು. ಈ  ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪುನಃ ವಿಚಾರಣೆ ಮಾಡಲು ಸುಪ್ರೀಂಕೋರ್ಟ್‌ ಆದೇಶಿಸಿದೆ. ಡಿಸೆಂಬರ್‌ 31 ರಂದು ಆದಾಯ ತೆರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ ಸೋನಿಯಾ ಹಾಗೂ ರಾಹುಲ್‌ ಆದಾಯವು 300 ಕೋಟಿ ರೂ.ಆಗಿದ್ದು, 100 ಕೋಟಿ ರೂ. ತೆರಿಗೆ ಭರಿಸಬೇಕಾಗಿದೆ. 

16ಕ್ಕೆ ಮುಂದೂಡಿಕೆ: ಮತ್ತೂಂದು ಬೆಳವಣಿಗೆಯಲ್ಲಿ ಎಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ ಕಚೇರಿ ತೆರವುಗೊಳಿಸಬೇಕು ಎಂಬ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಜ.16ಕ್ಕೆ ದೆಹಲಿ ಹೈಕೋರ್ಟ್‌ ಮುಂದೂಡಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا