Urdu   /   English   /   Nawayathi

ಕಾರಿಗೆ ಗುದ್ದಿದ ಸೈಕಲ್, ಕಾರಿನ ಬಂಪರ್ ಜಖಂ: ಫೋಟೋ ವೈರಲ್

share with us

ಶೆಂಝೆನ್: 09 ಜನುವರಿ (ಫಿಕ್ರೋಖಬರ್ ಸುದ್ದಿ) ಕಾರು ಮತ್ತು ಸೈಕಲ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ವಿಚಿತ್ರ ಘಟನೆಗೆ ಚೀನಾದ ನಗರವೊಂದರಲ್ಲಿ ನಡೆದಿದೆ. ಇದನ್ನು ನಂಬಲು ಅಸಾಧ್ಯವಾದರೂ, ಫೋಟೋ ಮಾತ್ರ ಇದನ್ನು ಸತ್ಯ ಎನ್ನುತ್ತಿದೆ. ಫನ್ನಿ ಆ್ಯಕ್ಸಿಡೆಂಟ್ ಗಳ ಬಗ್ಗೆ ನೀವು ಕೇಳಿರಬಹುದು. ಸಿನಿಮಾಗಳಲ್ಲಿ ನೋಡಿಯೂ ಇರಬಹುದು. ಆದರೆ ಈ ಫನ್ನಿ ಆ್ಯಕ್ಸಿಡೆಮಂಟ್ ನಮ್ಮ ಕಣ್ಣ ಮುಂದೆ ನಡೆದರೆ... ಹೌದು ಚೀನಾದ ಶೆಂಝೆನ್ ನಗರದ ಜನ ಇಂತಹುದೊದು ಫನ್ನಿ ಆ್ಯಕ್ಸಿಡೆಂಟ್ ಸಾಕ್ಷಿಯಾಗಿದ್ದರು, ಕಾರು ಮತ್ತು ಸೈಕಲ್ ಗೆ ಅಪಘಾತ ಸಂಭವಿಸಿ ಸೈಕಲ್ ಗೆ ಏನೂ ಆಗದೇ ಕಾರಿನ ಮುಂಭಾಗ ಜಖಂ ಆಗಿದೆ. ದಕ್ಷಿಣ ಚೀನಾದ ಶೆಂಝೆನ್‌ ನಗರದಲ್ಲಿ ಕಾರಿಗೆ ಸೈಕಲ್‌ ಗುದ್ದಿದ ರಭಸಕ್ಕೆ ಕಾರಿನ ಬಂಪರ್‌ ಪೂರ್ತಿ ಜಖಂ ಆಗಿದೆ. ಆದರೆ ವಿಚಿತ್ರ ಎಂದರೆ ಸೈಕಲ್ ಗೆ ಯಾವುದೇ ಹಾನಿಯಾಗಿಲ್ಲ.  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಈ ಫೋಟೋವನ್ನು ಹಲವರು ಫೋಟೋಶಾಪ್‌ ಎಂದುಕೊಂಡಿದ್ದರು. ಆದರೆ, ಕೊನೆಗೆ ಇದೊಂದು ನೈಜ ಘಟನೆ ಎಂಬುದು ಖಚಿತವಾಗಿದೆ.

ಚೀನಾದ ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಸೈಕಲ್ ಸವಾರ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ. ಈ ವೇಳೆ ಕಾರು ಅಡ್ಡಬಂದಿದ್ದು, ಕಾರಿಗೆ ನೇರವಾಗಿ ಸೈಕಲ್ ಗುದ್ದಿದೆ. ಪರಿಣಾಮ ಕಾರಿನ ಬಂಪರ್ ಜಖಂ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

https://youtu.be/dVJqgd_C45o

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا