Urdu   /   English   /   Nawayathi

ಕೇರಳದಲ್ಲಿನ್ನು ದಿಢೀರ್‌ ಹರತಾಳ ನಡೆಸುವಂತಿಲ್ಲ: ಹೈಕೋರ್ಟ್‌ ಆದೇಶ

share with us

ತಿರುವನಂತಪುರ: 07 ಜನುವರಿ (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ದಿಢೀರ್‌ ಹರತಾಳ ನಡೆಸುವುದನ್ನು ನಿಷೇಧಿಸಿ ಕೇರಳ ಹೈಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ. ಇನ್ನುಮುಂದೆ ಯಾವುದೇ ಸಂಘಟನೆಗಳು ಮತ್ತು ಪಕ್ಷಗಳು ಹರತಾಳಕ್ಕೆ ದಿಢೀರ್‌ ಕರೆ ನೀಡುವಂತಿಲ್ಲ. ಒಂದು ವೇಳೆ ಹರತಾಳ ನಡೆಸುವುದಾದರೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಆದೇಶದಲ್ಲಿ ಹೇಳಿದೆ. ಶಬರಿಮಲೆ ದೇಗುಲವನ್ನು ಮಹಿಳೆಯರು ಪ್ರವೇಶಿಸಿದ್ದ ಕಾರಣಕ್ಕೆ ಸರಣಿ ಹರತಾಳಕ್ಕೆ ಸಾಕ್ಷಿಯಾಗಿದ್ದ ಕೇರಳ ರಾಜ್ಯವು ಹೈಕೋರ್ಟ್‌ ಆದೇಶದಿಂದ ನಿರಾಳಗೊಂಡಿದೆ. 2018ರಲ್ಲಿ ನಡೆದ ದಿಢೀರ್‌ ಹರತಾಳಗಳಿಂದ 97 ಕೆಲಸದ ದಿನಗಳು ನಷ್ಟವಾಗಿವೆ. ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಇದರಿಂದ ಸಾಕಷ್ಟು ನಷ್ಟ ಅನುಭವಿಸಿವೆ. ಹಾಗಾಗಿ ರಾಜ್ಯದಲ್ಲಿ ದಿಢೀರ್‌ ಹರತಾಳ ನಿಷೇಧಿಸಬೇಕು ಎಂದು ಕೇರಳದ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ ಪರಿಗಣಿಸಿದ್ದು, ಈ ಆದೇಶ ಹೊರಡಿಸಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا