Urdu   /   English   /   Nawayathi

ವಿಧಾನಸೌಧ ಬಳಿ ಹಣ ಪತ್ತೆ ಪ್ರಕರಣ: ಮತ್ತೊಬ್ಬ ಸಚಿವರ ಪಿಎ ಹೆಸರು ಹೇಳಿದ ಟೈಪಿಸ್ಟ್ ಮೋಹನ್

share with us

ಬೆಂಗಳೂರು: 06 ಜನುವರಿ (ಫಿಕ್ರೋಖಬರ್ ಸುದ್ದಿ) ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್  ಬಳಿ ದಾಖಲೆ ಇಲ್ಲದ 25.76 ಲಕ್ಷ ರೂ ಹಣದ ಪತ್ತೆ ಪ್ರಕರಣವನ್ನು  ಎಸಿಬಿಗೆ ವರ್ಗಾಯಿಸಲಾಗಿದ್ದು, ಈ ಪ್ರಕರಣದಲ್ಲಿ ಮತ್ತೊಬ್ಬ ಸಚಿವರ ಆಪ್ತ ಸಹಾಯಕರ ಹೆಸರನ್ನು ತನಿಖಾ ಧಿಕಾರಿಗಳ ಮುಂದೆ ಮೋಹನ್ ಬಾಯ್ಬಿಟ್ಟಿದ್ದಾನೆ. ಕಾರ್ಮಿಕ ಸಚಿವ ವೆಂಕಟರಮಣ್ಣಪ್ಪ ಅವರ ಆಪ್ತ ಸಹಾಯಕ ಕೃಷ್ಣಮೂರ್ತಿ ಹಾಗೂ ವಿಧಾನಸೌಧದಲ್ಲಿಯೇ ಕಾರ್ಯನಿರ್ವಹಿಸುವ ಇನ್ನಿಬ್ಬರು ಅಧಿಕಾರಿಗಳ ಹೆಸರನ್ನು ಮೋಹನ್ ಹೇಳಿದ್ದು, ಸ್ಪಷ್ಟೀಕರಣ ಪಡೆಯಲು ಕೃಷ್ಣಮೂರ್ತಿ ಹಾಗೂ ಇಬ್ಬರು ಅಧಿಕಾರಿಗಳಿಗೆ  ನೋಟಿಸ್  ಕಳುಹಿಸಲಾಗಿದೆ ಎಂದು ವಿಧಾನ ಸೌಧ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೋಹನ್ ಗುತ್ತಿಗೆ ಆಧಾರದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದು,ಅಷ್ಟು ಹಣ ಎಲ್ಲಿಂದು ಬಂತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮೋಹನ್ ಹೇಳಿದ ಮೂವರು ಗುತ್ತಿಗೆದಾರರಿಗೂ ನೋಟಿಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಚಿವಾಲಯ ಕಟ್ಟಡದಿಂದ ಮೋಹನ್ ಹಣ ತರುತ್ತಿದ್ದ ದೃಶ್ಯ ಸಿಸಿಟಿವಿ ಪರಿಶೀಲನೆ ವೇಳೆಯೂ ಗುತ್ತಾಗಿದ್ದು, ಆತನ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಿಂದ ಹಣ ತೆಗೆದುಕೊಂಡು ಮೋಹನ್ ಶುಕ್ರವಾರ ಸಂಜೆ ಹೊರಗೆ ಬರುತ್ತಿದ್ದ ವೇಳೆಯಲ್ಲೇ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದರು. ಅವರನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا