Urdu   /   English   /   Nawayathi

ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ, ಅರ್ಚಕರ ಕುಟುಂಬದ ಮೇಲೆ ದಾಳಿ

share with us

ಢಾಕಾ: 06 ಜನುವರಿ (ಫಿಕ್ರೋಖಬರ್ ಸುದ್ದಿ) ಬಾಂಗ್ಲಾದಲ್ಲಿ ದುಷ್ಕರ್ಮಿಗಳಿಂದ ಮತ್ತೆ ಹಿಂದು ದೇವಾಲಯವೊಂದರ ಮೇಲೆ ದಾಳಿ ಮುಂದುವರಿದಿದೆ. ಎರಡು ಗುಂಪುಗಳ ನಡುವಣ ಘರ್ಷಣೆ ವೇಳೆ ಶಿವ ಮಂದಿರವೊಂದನ್ನು ದುಷ್ಕರ್ಮಿಗಳು ನಾಶ ಮಾಡಿ, ದೇಗುಲದ ಅರ್ಚಕರ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಘಟನೆ ಬಾಂಗ್ಲಾದ ತಂಗೈಲ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬತ್ರಾ ಗ್ರಾಮದಲ್ಲಿ ಒಂಭತ್ತು ಜನರ ಗುಂಪೊಂದು ದಾಳಿ ಮಾಡಿ ಶಿವ ದೇಗುಲವನ್ನು ಧ್ವಂಸಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚಿತ್ತರಂಜನ್ ಎಂಬುವರು 20 ವರ್ಷಗಳ ಹಿಂದೆ ಜಮೀನನೊಂದನ್ನು ಖರೀದಿಸಿ ದೇಗುಲ ನಿರ್ಮಿಸಿದ್ದರು. ಈಗ ದುಷ್ಕರ್ಮಿಗಳ ದಾಳಿಗೆ ಅದು ನಾಶವಾಗಿದೆ. ಈ ಘಟನೆ ನಂತರ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನೆಲೆಸಿದ್ದು, ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا