Urdu   /   English   /   Nawayathi

ಅಕ್ರಮ ಮರಳು ಗಣಿಗಾರಿಕೆ ಕೇಸ್: ಅಖಿಲೇಶ್ ಯಾದವ್ ಸಿಬಿಐ ವಿಚಾರಣೆ?

share with us

ಲಖನೌ: 05 ಜನುವರಿ (ಫಿಕ್ರೋಖಬರ್ ಸುದ್ದಿ) ಅಕ್ರಮ ಮರಳು ಗಣಿಗಾರಿಕೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ 2012 ಹಾಗೂ 2013ರ ನಡುವಿನ ಅವಧಿಯಲ್ಲಿ  ನಡೆಸಲಾಗಿರುವ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಅಖಿಲೇಶ್ ಯಾದವ್  ಹೆಚ್ಚುವರಿಯಾಗಿ ಗಣಿ ಖಾತೆಯನ್ನು ಇಟ್ಟುಕೊಂಡಿದ್ದರು. ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ ದೆಹಲಿ, ಉತ್ತರ ಪ್ರದೇಶ, ಸೇರಿದಂತೆ 12 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಸಚಿವರ ವಿರುದ್ಧವೂ ಸಿಬಿಐ ವಿಚಾರಣೆ ನಡೆಸಲಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿಗೂ ಸಿಬಿಐ ನೋಟಿಸ್ ನೀಡಲಾಗಿದೆ. ಸಮಾಜವಾದಿ ಪಕ್ಷದ ಎಂಎಲ್ ಸಿ ರಮೇಶ್ ಮಿಶ್ರಾ, ಬಿಎಸ್ಪಿ ಮುಖಂಡ ರಾಮ್ ಅವತಾರ್  ರಜಪೂತ್ ಅವರಿಗೆ ಸೇರಿದ ಆಸ್ತಿಪಾಸ್ತಿಯನ್ನು ಇಂದು ಶೋಧಿಸಲಾಗಿದೆ. ಐಎಎಸ್ ಅಧಿಕಾರಿ ಬಿ ಚಂದ್ರಕಲಾ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಈ ಅಧಿಕಾರಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ ಎಸ್ಪಿ ಮುಖಂಡರ ಪರವಾಗಿ ಕೆಲಸ ಮಾಡಿರುವ ಆರೋಪ ಕೇಳಿಬಂದಿದೆ.

ಲಖನೌ, ಹಮಿರ್ ಪುರ್ , ಜುಲ್ಹಾನ್ ಮೊದಲಾದ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಲಹಾಬಾದ್ ಹೈಕೋರ್ಟಿನ ಸೂಚನೆ ಮೇರೆಗೆ ಸಿಬಿಐ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಹೊರಗಿಟ್ಟು ಮುಂಬರುವ ಚುನಾವಣೆಗೆ ಬಿಎಸ್ಪಿ, ಎಸ್ಪಿ ಮೈತ್ರಿ ಮಾಡಿಕೊಂಡ ಮಾರನೆ ದಿನವೇ ಈ  ಸಿಬಿಐ ದಾಳಿ ನಡೆದಿದ್ದು, ವಿವಾದವನ್ನು ಹುಟ್ಟುಹಾಕುವ ಸಾಧ್ಯತೆ ಇದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا