Urdu   /   English   /   Nawayathi

ನೀವು ಗಂಡಸರೇ ಆಗಿದ್ರೆ ಮುಟ್ರೋ ಬಸ್ಸನ್ನು'; ಶಬರಿಮಲೆ ಪ್ರತಿಭಟನಾಕಾರರಿಗೆ ಪೊಲೀಸ್ ಅವಾಜ್, ವಿಡಿಯೋ ವೈರಲ್

share with us

ಕನ್ಯಾಕುಮಾರಿ: 05 ಜನುವರಿ (ಫಿಕ್ರೋಖಬರ್ ಸುದ್ದಿ) ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದನ್ನು ಖಂಡಿಸಿ ಕೇರಳದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು ಬಸ್ ತಡೆದ ಪ್ರತಿಭಟನಾಕಾರರಿಗೆ ಪೊಲೀಸ್ ಆವಾಜ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮಿಳುನಾಡು-ಕೇರಳ ಗಡಿಯಲ್ಲಿರುವ ಕಲಿಯಕ್ಕವಿಲ್ಲೈನಲ್ಲಿ ಸಹ ಪ್ರತಿಭಟನೆಯ ಕಾವು ಜೋರಾಗಿತ್ತು. ಈ ವೇಳೆ ಪ್ರತಿಭಟನಕಾರರು ಬಸ್ ಅನ್ನು ತಡೆದ ಡ್ರೈವರ್ ಅನ್ನು ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಬ್ ಇನ್ಸ್ ಪೆಕ್ಟರ್ ಮೋಹನ್ ಅಯ್ಯರ್ ಪ್ರತಿಭಟನಕಾರರಿಗೆ ನೀವು ಗಂಡಸರೇ ಆಗಿದ್ರೆ ಬಸ್ ಅನ್ನು ಮುಟ್ಟಿ ಎಂದು ಆವಾಜ್ ಹಾಕಿದ್ದಾರೆ. 

ಪೊಲೀಸ್ ರೋಷಾವೇಶ ಕಂಡ ಪ್ರತಿಭಟನಾಕಾರರ ಧೈರ್ಯವೆಲ್ಲ ಉಡುಗಿ ಹೋಗಿತ್ತು. ಅವರೆಲ್ಲ ಸ್ಥಳದಿಂದ ಕಾಲ್ಕಿತ್ತರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ಪೊಲೀಸ್ ಅಧಿಕಾರಿಯನ್ನು ನಿಜ ಜೀವನದ ಸಿಂಗಂ, ಸಿಂಬಾ ಎಂದು ಕೊಂಡಾಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا