Urdu   /   English   /   Nawayathi

ಅಪರಿಚಿತ ಸಂಖ್ಯೆಯಿಂದ ಮಿಸ್ ಕಾಲ್ ಬರುತ್ತಿದೆಯೇ..? ಹುಷಾರ್..!

share with us

ಮುಂಬೈ: 03 ಜನುವರಿ (ಫಿಕ್ರೋಖಬರ್ ಸುದ್ದಿ) ತಂತ್ರಜ್ಞಾನ ಬೆಳೆದಂತೆ ಅದರ ದುರುಪಯೋಗ ಕೂಡ ಹೆಚ್ಚುತ್ತಲೇ ಇದೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬಂತೆ ಒಂದಲ್ಲೊಂದು ತಾಜಾ ಉದಾಹರಣೆ ಇದೆ. ಅತೀ ಸುಲಭವಾಗಿ ವಂಚಕರು ನಮ್ಮ ಖಾತೆಯಲ್ಲಿರುವ ಹಣವನ್ನು ಹೇಗೆ ದೋಚುತ್ತಾರೆ ಎನ್ನುವುದಕ್ಕೆ ಇದೊಂದು ಸ್ಯಾಂಪಲ್ ಅಷ್ಟೇ. ಇಲ್ಲಿನ ಮಹೀಮ್ ನ ಉದ್ಯಮಿಯಾಗಿರುವ ವಿ. ಶಾ ಅವರ ಮೊಬೈಲ್ ಗೆ ಡಿ.27-28ರ ನಡುವೆ ಅಂದರೆ ರಾತ್ರಿ 2 ಗಂಟೆ ಸುಮಾರಿಗೆ 6 ಮಿಸ್ ಕಾಲ್ ಗಳು ಬಂದಿತ್ತು. ಅದರಲ್ಲಿ ಒಂದು ಕರೆಯ ಡಯಲಿಂಗ್ ಕೋಡ್ ಬ್ರಿಟನ್ ನದ್ದಾಗಿತ್ತು (+44). ಬೆಳಗ್ಗೆ ಈ ಕರೆಗಳನ್ನು ನೋಡಿದ ಶಾ ಆ ಸಂಖ್ಯೆಗಳಿಗೆ ಕರೆ ಮಾಡಿದ್ದಾರೆ. ಆದರೆ ಅವರ ಸಿಮ್ ಡಿ ಆಯಕ್ಟಿವೇಟ್ ಆದ ಬಗ್ಗೆ ತಿಳಿದು ಅವರು ಆಘಾತಕ್ಕೊಳಗಾಗಿದ್ದರು. ಕೂಡಲೇ ಸಿಮ್ ಸರ್ವಿಸ್ ಪ್ರೊವೈಡರ್ ಗೆ ಕರೆ ಮಾಡಿದಾಗ ಶಾ ಅವರ ಮನವಿಯ ಮೇರೆಗೆ ಸಿಮ್ ಡಿ ಆಯಕ್ಟಿವೇಟ್ ಮಾಡಲಾಗಿದೆ ಎನ್ನುವ ಮಾಹಿತಿ ಲಭಿಸಿತು. ಇದರಿಂದ ಸಂಶಯಗೊಂಡ ಶಾ ಬ್ಯಾಂಕ್ ಗೆ ಭೇಟಿ ನೀಡಿ ತನ್ನ ಖಾತೆಯಲ್ಲಿರುವ ಮೊತ್ತದ ಬಗ್ಗೆ ವಿಚಾರಿಸಿದರು. ಬ್ಯಾಂಕ್ ಸಿಬ್ಬಂದಿ ಹೇಳಿದ ಮಾಹಿತಿ ಕೇಳಿದ ಶಾ ಅವರಿಗೆ ಒಂದು ಕ್ಷಣ ಸಿಡಿಲು ಬಡಿದಂತಾಗಿತ್ತು. ಅವರ ಕಂಪೆನಿಯ ಖಾತೆಯಲ್ಲಿದ್ದ 1.86 ಕೋಟಿ ರೂ.ಗಳನ್ನು ವಂಚಕರು ದೋಚಿದ್ದರು.

28 ಟ್ರಾನ್ಸಾಕ್ಷನ್ ಗಳ ಮೂಲಕ 14 ಖಾತೆಗಳಿಗೆ ಅವರ ಹಣವನ್ನು ವರ್ಗಾಯಿಸಲಾಗಿತ್ತು. ಬ್ಯಾಂಕ್ ತನ್ನಿಂದಾದ ಪ್ರಯತ್ನ ನಡೆಸಿ 20 ಲಕ್ಷ ರೂ,ಗಳನ್ನು ವಾಪಸ್ ಪಡೆಯುವಂತಾಯಿತು. ಆದರೆ ಉಳಿದ ಹಣ ವಂಚಕರ ಪಾಲಾಗಿದೆ. ಈ ಬಗ್ಗೆ ಬಿಕೆಸಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಒಟ್ಟಿನಲ್ಲಿ ಅಪರಿಚ ಕರೆ, ಮೆಸೇಜ್ ಅಥವಾ ಇ- ಮೇಲ್ ಗಳ ಬಗ್ಗೆ ನೀವು ಹುಷಾರಾಗಿರಿ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا