Urdu   /   English   /   Nawayathi

ಯುದ್ಧ ಸಂತ್ರಸ್ಥ ಆಫ್ಘಾನ್ ನಲ್ಲಿ ಗ್ರಂಥಾಲಯ ಬಳಸುವವರು ಯಾರು? ಮೋದಿ ನಡೆ ಕುರಿತು ಟ್ರಂಪ್ ವ್ಯಂಗ್ಯ

share with us

ವಾಷಿಂಗ್ಟನ್: 03 ಜನುವರಿ (ಫಿಕ್ರೋಖಬರ್ ಸುದ್ದಿ) ಮಹತ್ವದ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆಯಲ್ಲಿ ಭಾರತದ ದಶಕಗಳ ಹಳೆಯ ಪಾತ್ರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಭಾರತ, ರಷ್ಯಾ ಮತ್ತು ಪಾಕಿಸ್ತಾನ ಸೇರಿದಂತೆ ಅಫ್ಘಾನಿಸ್ಥಾನ ನೆರೆ ರಾಷ್ಟ್ರಗಳು ತಾಲಿಬಾನಿಗಳ ವಿರುದ್ಧ ಯುದ್ಧಭೂಮಿಯಲ್ಲಿ ಹೋರಾಟಕ್ಕೆ ಸರಿಯಾಗಿ ಸಾಥ್ ನೀಡುತ್ತಿಲ್ಲ ಎಂದಿದ್ದಾರೆ. ಈ ವರ್ಷದ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಟ್ರಂಪ್ ಅಫ್ಘಾನಿಸ್ಥಾನ ಗ್ರಂಥಾಲಯಕ್ಕೆ ಹಣ ಹೂಡಿಕೆ ಮಾಡಿದ್ದ ಮೋದಿಯವರ ಕ್ರಮ ಟೀಕಿಸಿದ್ದು ಆ ರಾಷ್ಟ್ರದಲ್ಲಿ ಇದನ್ನು ಯಾರು ಬಳಸಿಕೊಳ್ಳುತ್ತಾರೆ ಎಂದು ಅಚ್ಚರಿ ವ್ಯಕ್ತಪಡಿಸಿದಾರೆ. ಸಂಪುಟ ಸಭೆಯ ಕುರಿತು ಮಾದ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಟ್ರಂಪ್ ಅಫ್ಘಾನಿಸ್ಥಾನದಲ್ಲಿ ರಷ್ಯಾ ಸೇನೆಯಾಗಲಿ, ಪಾಕಿಸ್ತಾನವಾಗಲಿ, ಭಾರತವಾಗಲಿ ಏಕೆ ಇಲ್ಲ? ಅಮೆರಿಕಾ ಸೈನ್ಯವೇ ಏಕಿದೆ?ನಾವು 6,000 ಮೈಲಿಗಳಷ್ಟು ದೂರದಲ್ಲಿದ್ದೇವೆ ಆದರೆ ನಮಗೆ ನಮ್ಮ ಜನರ ರಕ್ಷಣೆ ಮುಖ್ಯವಾಗಿದೆ.ನಮ್ಮ ಜನರಿಗೆ ಸಹಾಯ ಮಾಡಲು ನಾವು ಬಯಸುತ್ತೇವೆ, ಇತರ ರಾಷ್ಟ್ರಗಳಿಗೆ ಸಹಾಯ ಮಾಡಲು ನಾವು ಬಯಸುತ್ತೇವೆ "ಎಂದರು. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಕಡೆಗೆ ಭಾರತ ನಡೆಸಿದ ಪ್ರಯತ್ನಗಳನ್ನು ಅಮೆರಿಕ ಅಧ್ಯಕ್ಷರು ಉಲ್ಲೇಖಿಸಿದ್ದಾರೆ ಆದರೆ ಯುದ್ಧದಿಂದ ನಾಶವಾಗಿರುವ ದೇಶಕ್ಕಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಸಾಕಷ್ಟು ನೆರವು ನೀಡುತ್ತಿಲ್ಲ ಎಂದೂ ಆರೋಪಿಸಿದರು 

ಅಫ್ಘಾನ್ ಯುದ್ಧ ಹಾಗೂ ತಾಲಿಬಾನಿಗಳ ನಿಯ್ತಂತ್ರಣಕ್ಕಾಗಿ ಅಮೆರಿಕಾ ಶತಕೋಟಿ ಡಾಲರ್ ಮೊತ್ತ ಖರ್ಚುಮಾಡಿದೆ ಎಂದಿರುವ ಟ್ರಂಪ್ ಆದರೆ ರಷ್ಯಾ, ಭಾರತ ಸೇರಿ ಇತರೆ ರಾಷ್ಟ್ರಗಳು ಕೇವಲ 100 ಅಥವಾ 200 ಸೈನಿಕರನ್ನು ಕಳುಹಿಸುವ ಮೂಲಕ ತಾವು ಶಾಂಪ್ತಿ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ ಎಂದು ಹೇಳಿಕೊಳ್ಳುತ್ತವೆ. ಟ್ರಂಪ್ ಮೋದಿಯವರ ಸ್ನೇಹಪರ ನಡೆಯನ್ನು ಶ್ಲಾಘಿಸಿದ್ದರೂ ಮೋದಿ ಅಫ್ಘಾನ್ ನಲ್ಲಿ ಗ್ರಂಥಾಲಯಕ್ಕಾಗಿ ಹಣ ನೀಡಿದ್ದ ಕ್ರಮವನ್ನು ಟೀಕಿಸಿದ್ದಾರೆ. "ಮೋದಿಯವರು ಬಹಳ ಬುದ್ದಿವಂತರು, ಇದರಲ್ಲಿ ಸುಳ್ಳಿಲ್ಲ ಆದರೆ ಯುದ್ಧ ಸಂತ್ರಸ್ಥ ಅಫ್ಘಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿರುವುದರಿಂದ ಪ್ರಯೋಜನವಿದೆಯೆ? ಅಲ್ಲಿ ಅದನ್ನು ಯಾರು ಬಳಸಿಕೊಳ್ಳುತ್ತಾರೆ?" ಟ್ರಂಪ್ ಪ್ರಶ್ನಿಸಿದ್ದಾರೆ. "ಕಳೆದ ಕೆಲವು ವರ್ಷಗಳಲ್ಲಿ ಇತರ ದೇಶಗಳು ನಮಗೆ ಕೇವಲ ಕೆಲವೇ ಸಂಖ್ಯಯ ಸೈನಿಕರ ನೆರವನ್ನು ನೀಡಿದೆ.ಮತ್ತು ಆ ರಾಷ್ಟ್ರಗಳು ವಿಶ್ವಶಾಂತಿಯ ಕುರಿತು ಮಾತನಾಡುತ್ತವೆ. ಮತ್ತು ನಾವು ಅವರ ಮಿಲಿಟರಿಗೆ ಶತಕೋಟಿ ಡಾಲರ್ ಗಳನ್ನು ನೀಡಿದ್ದೇವೆ."ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا