Urdu   /   English   /   Nawayathi

ಚಂದ್ರನ ಮೇಲೆ ಚೀನಾದ 'ಚಾಂಗ್ ಇ- 4' ಯಶಸ್ವಿ ಲ್ಯಾಂಡಿಂಗ್

share with us

ಬೀಜಿಂಗ್‌: ತಂತ್ರಜ್ಞಾನ ಹಾಗೂ ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವದ ದೊಡ್ಡ ರಾಷ್ಟ್ರಗಳಿಗೇ ಸೆಡ್ಡು ಹೊಡೆದಿರುವ ಚೀನಾ, ಇದೀಗ ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ದೊಡ್ಡ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಚಂದ್ರನ ಮೇಲೆ 'ಚಾಂಗ್ ಇ- 4' ಬಾಹ್ಯಾಕಾಶನೌಕೆಯನ್ನು ಗುರುವಾರ ಯಶಸ್ವಿಯಾಗಿ ಲ್ಯಾಂಡ್ ಮಾಡಿದೆ. ಚಂದ್ರನ ಅಂಗಳದಲ್ಲಿ ನೆಲೆ ಸ್ಥಾಪಿಸಲು ಚೀನಾ ‘ಚಾಂಗ್ ಇ- 4’ ಯೋಜನೆ ರೂಪಿಸಿದ್ದು, ಈ ಯೋಜನೆಯ ವಿಶೇಷವೆಂದರೆ, ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಮಗ್ಗು ಲಿನ ಮೇಲೆ ತನ್ನ ಉಪಗ್ರಹವನ್ನು ಇಳಿಸಿ ಆ ಪಾರ್ಶ್ವದ ಅಧ್ಯಯನ ಮಾಡುವುದಾಗಿದೆ.

'ಚಾಂಗ್ ಇ- 4' ಚಂದ್ರನ ಮೇಲೆ ಇಳಿದ ತಕ್ಷಣ ಭೂಮಿಗೆ ಫೋಟೋವೊಂದನ್ನು ರವಾನಿಸಿದ್ದು, ಅದನ್ನು ಕ್ಸಿನ್ಹುಆ ಸುದ್ದಿ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 'ಚಾಂಗ್ ಇ- 4' ಬೆಳಗ್ಗೆ 10.30ಕ್ಕೆ ಚಂದ್ರನ ಮೇಲೆ ಇಳಿದಿದ್ದು, ಇದನ್ನು ಸರ್ಕಾರಿ ಮಾಧ್ಯಮ ಚೀನಾ ಸೆಂಟ್ರಲ್ ಟಿವಿಯಲ್ಲಿ ಪ್ರಕಟಿಸಲಾಗಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ತಿಳಿಸಿದೆ. ಈ ಹಿಂದೆ, ಅಮೆರಿಕ, ರಷ್ಯಾ ದೇಶಗಳು ಚಂದ್ರನಲ್ಲಿಗೆ ತಮ್ಮ ನೌಕೆಗಳನ್ನು ಕಳುಹಿಸಿ ಅಲ್ಲಿನ ಮಣ್ಣು, ಕಲ್ಲು ಇತ್ಯಾದಿಗಳನ್ನು ಪರೀಕ್ಷೆಗಾಗಿ ಭೂಮಿಗೆ ತಂದಿದ್ದವು. ಆದರೆ, ನಾವು ಕಾಣದ ಚಂದ್ರನ ಮಗ್ಗುಲಿಗೆ ಉಪಗ್ರಹವನ್ನು ಕಳುಹಿಸಿರಲಿಲ್ಲ. ಇದೀಗ, ಆ ಕೆಲಸಕ್ಕೆ ಚೀನಾ ಕೈ ಹಾಕಿದೆ. ಈ ಯೋಜನೆ ಯಶಸ್ವಿಯಾದರೆ, ಚಂದ್ರನ ಅಧ್ಯಯನದಲ್ಲಿ ಅಮೆರಿಕ, ರಷ್ಯಾ ಮಾಡಿರುವ ಸಾಧನೆಗಳನ್ನು ಚೀನಾ ಹಿಂದಿಕ್ಕಿದಂತಾಗುತ್ತದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا