Urdu   /   English   /   Nawayathi

ಚಿನ್ನ ಸ್ಮಗ್ಲಿಂಗ್ ಮಾಡುವುದು ಒಂದು ಕಲೆ, ಅದಕ್ಕೆ ಕಠಿಣ ತರಬೇತಿ ಅಗತ್ಯ!

share with us

ಬೆಂಗಳೂರು: 02 ಜನುವರಿ (ಫಿಕ್ರೋಖಬರ್ ಸುದ್ದಿ) ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡಿರುವ ಚಿನ್ನವನ್ನು ಹೆೇಗೆ ಪತ್ತೆ ಹಚ್ಚುವುದು ಎಂಬುದನ್ನು ಭಾರತೀಯ ಕಸ್ಟಮ್ಸ್ ಅಧಿಕಾರಿಗಳು ಚೆನ್ನಾಗಿ ತಿಳಿದುಕೊಂಡಿದ್ದಾರೆ.  ಹಾಗೆಯೇ ಚಿನ್ನ ಕಳ್ಳ ಸಾಗಣೆ ಮಾಡುವವರು ಕೂಡ ಆರು ತಿಂಗಳ ಕಠಿಣ ತರಬೇತಿ ಪಡೆದುಕೊಂಡಿರುತ್ತಾರೆ. ಹಾಗಯೇ ಚಿನ್ನ ಕಳ್ಳ ಸಾಗಣೆ ಮಾಡುವವರು ಸಿಕ್ಕಿಬಿದ್ದ ವೇಳೆ ತಮ್ಮ ಕಠಿಣ ತರಬೇತಿಯ ಬಗ್ಗೆ ಎಲ್ಲಾ ಸಿಕ್ರೇಟ್ ಗಳನ್ನು ಬಿಚ್ಚಿಡುತ್ತಾರೆ.  ಕಾಫಿ ಮಗ್, ಊಟದ ಡಬ್ಬಿ, ಸಿಲ್ವರ್  ಪಾಯಿಲ್, ಸೇರಿದಂತೆ ಹಲವು ವಸ್ತುಗಳಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಬರಲುತುಂಬ ಪ್ರಯಯತ್ನಿಸುತ್ತಾರೆ. ಆದರೆ ಅವರ ನಡಿಗೆಯ ಶೈಲಿ, ನೋಟ,ಅವರು ಹೇಗೆ ಕುಳಿತುಕೊಳ್ಳುತ್ತಾರೆ. ನಿಂತುಕೊಳ್ಳುತ್ತಾರೆ ಎಂಬ ಚಟುವಟಿಕೆಗಳನ್ನು ನೋಡಿಯೇ ಅವರು ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎಂಬುದು ನಮಗೆ ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಪೇಗೌಡ ಎರ್ ಪೋರ್ಟ್ ನಲ್ಲಿರುವ ಕಸ್ಟಮ್ಸ್ ಅಧಕಾರಿಗಳು ಹೇಳಿದ್ದಾರೆ. ತಮ್ಮ ಉತ್ತಮ ಪ್ರಯತ್ನದ ನಡೆುವೆಯೂ ಕೆಲವೊಮ್ಮೆ ಚಿನ್ನ ಕಳ್ಳ ಸಾಗಣೆದಾರರು ಸಿಕ್ಕಿ ಬೀಳುತ್ತಾರೆ.  ಕಳ್ಳ ಸಾಗಣೆ ಪತ್ತೆ ಹಚ್ಚಲು ನಾವು ಕೂಡ ಉತ್ತರ ತರಬೇತಿ ಪಡೆದಿರುತ್ತೇವೆ ಎಂಬುದನ್ನು ಅವರು ಮರೆತಿರುತ್ತಾರೆ.

ಇತ್ತೀಚೆಗೆ ನಡೆದ ಘಟನೆಯೊಂದನ್ನ ವಿವಿರಿಸಿದ ಅಧಿಕಾರಿಗಳು, ಚಿನ್ನ ಕಳ್ಳ ಸಾಗಣೆ ಮಾಡಲಾಗುತ್ತಿದಿಯೇ ಎಂಬ ಬಗ್ಗೆ ಪರಿಶೀಲನೆ ಮಾಡುವಾಗ ಪ್ರಯಾಣಿಕನೊಬ್ಬ ತನ್ನ ಕಿಬ್ಬೊಟ್ಟೆಯ ಭಾಗದಲ್ಲಿ ಚಿನ್ನ ಅಡಗಿಸಿಟ್ಟಿರುವುದು ತಿಳಿದು  ಬಂದಿತ್ತು. ಈ ವೇಳೆ ನಾವು  ಸರ್ಜರಿ ಮೂಲಕ ಚಿನ್ನ ತೆಗೆಯುತ್ತೇವೆ ಎಂಬ ಬೆದರಿಕೆ ಹಾಕಿದವು, ಆ ಸಮಯಕ್ಕೆ ಆತನೆ ತನ್ನ ಕೆಳ ಹೊಟ್ಟೆಯ ಭಾಗದಿಂದ ಚಿನ್ನ ತೆಗೆದು ಕೊಟ್ಟ. ಅವನ ತನ್ನ ಹೊಟ್ಟೆಯಿಂದ ಚಿನ್ನದ ಬಾರ್ ಗಳನ್ನು ತೆಗೆದುಕೊಟ್ಟ ರೀತಿ ಆಶ್ಚರ್ಯ ತಂದಿತ್ತು. ತರಬೇತಿ ವೇಳೆ ವೈದ್ಯರು ಸಹ ಹಾಜರಿರುತ್ತಾರೆ, ಮಾನವ ದೇಹ ರಚನೆಯ ಬಗ್ಗೆ ವಿವರಿಸುವ ಅವರು,ಚಿನ್ನದ ಬಾರ್ ಗಳನ್ನು ಹೇಗೆ ಒಳಗೆ ತೂರಿಸುವುದು ಎಂಬ ಬಗ್ಗೆ ವಿವರಿಸುತ್ತಾರೆ. ಸುಮಾರು 250 ಗ್ರಾಂ ಚಿನ್ನದ ಬಾರ್ ಗಳನ್ನು ಸೆ್ಲೋ ಟೇಪ್ ನಲ್ಲಿ ಸುತ್ತಿ ಗುದ ದ್ವಾರದಲ್ಲಿ ಇಡುತ್ತಾರೆ. ಮೊದಲೇ ಆರು ತಿಂಗಳ ಮುಂಚೆ ಡಮ್ಮಿ ಟಾಸ್ಕ್  ಮಾಡುತ್ತಿರುತ್ತಾರೆ. ಅವರು ಒಂದು ವೇಳೆ ಯಶಸ್ವಿಯಾಗಿ ಕಳ್ಳ ಸಾಗಣೆ ಮಾಡಿದರೇ  ಒಂದು ಟ್ರಿಪ್ ಗೆ 20 ರಿಂದ 40 ಸಾವಿರ ರು,  ಹಣ ಪಡೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا