Urdu   /   English   /   Nawayathi

ದೊಡ್ಡಣ್ಣ ಟ್ರಂಪ್’ಗೆ ಬೆದರಿಕೆ ಹಾಕಿದ ಸರ್ವಾಧಿಕಾರಿ ‘ಕಿರಿಕ್’ ಕಿಮ್

share with us

ಸಿಯೋಲ್: 01 ಜನುವರಿ (ಫಿಕ್ರೋಖಬರ್ ಸುದ್ದಿ) ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್ ಮತ್ತೆ ಅಮೆರಿಕ ವಿರುದ್ಧ ಖ್ಯಾತೆ ತೆಗೆದಿದ್ದಾರೆ. ಅಣ್ವಸ್ತ್ರ ಸಜ್ಜಿತ ದೇಶದ ಮೇಲೆ ದಿಗ್ಬಂಧನ ಹೇರುವ ಅಮೆರಿಕದ ಧೋರಣೆ ಬದಲಾಗದಿದ್ದರೆ ನಮ್ಮ ಕಾರ್ಯತಂತ್ರವನ್ನು ಬದಲಿಸಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಹೊಸ ವರ್ಷದ ಅಂಗವಾಗಿ ದೇಶದ ಜನತೆಗೆ ಶುಭ ಸಂದೇಶ ನೀಡಿದ ಸಂದರ್ಭದಲ್ಲಿ ಕಿಮ್ ಅಮೆರಿಕ ವಿರುದ್ಧ ಕಿಡಿ ಕಾರಿದರು. ಇಡೀ ವಿಶ್ವದ ಮುಂದೆ ಅಮೆರಿಕ ನೀಡಿರುವ ತನ್ನ ವಾಗ್ವಾದವನ್ನು ಉಳಿಸಿಕೊಳ್ಳದಿದ್ದರೆ ಹಾಗೂ ನಮ್ಮ ಗಣರಾಜ್ಯದ ಮೇಲೆ ದಿಗ್ಬಂಧನ /ಒತ್ತಡ ಹೇರುವುದನ್ನು ಮುಂದುವರೆಸಿದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ.

ಅಲ್ಲದೆ ನಮ್ಮ ಸಾರ್ವಭೌತ್ವ ಮತ್ತು ಹಿತಾಸಕ್ತಿಗಳ ರಕ್ಷಣೆಗಾಗಿ ಹೊಸ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಳೆದ ವರ್ಷ ಜೂನ್‍ನಲ್ಲಿ ಅಮೆರಿಕ ಅಧ್ಯಕ್ಷರು ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿಯ ನಡುವೆ ಸಿಂಗಾಪುರದಲ್ಲಿ ನಡೆದ ಶೃಂಗಸಭೆ ಫಲಪ್ರದವಾಗಿತ್ತು. ತನ್ನ ದೇಶದಲ್ಲಿರುವ ಎಲ್ಲ ಅಣ್ವಸ್ತ್ರ ನೆಲೆಗಳನ್ನು ನಾಶಗೊಳಿಸುವುದಾಗಿ ಕಿಮ್ ಭರವಸೆ ನೀಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ ಅಮೆರಿಕ ಕೆಲವು ಷರತ್ತುಗಳೊಂದಿಗೆ ದಿಗ್ಬಂಧನ ಕ್ರಮಕ್ಕೆ ಮುಂದಾಗಿರುವುದರಿಂದ ಉಭಯ ದೇಶಗಳ ನಡುವಣ ಸಂಬಂಧ ಅಳಸುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا