Urdu   /   English   /   Nawayathi

ಬಾಂಗ್ಲಾ ಸಾರ್ವತ್ರಿಕ ಚುನಾವಣೆ ವೇಳೆ ಹಿಂಸಾಚಾರಕ್ಕೆ10 ಮಂದಿ ಬಲಿ..!

share with us

ಢಾಕಾ: 31 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಹಿಂಸಾಚಾರ ಮತ್ತು ವಿರೋಧಪಕ್ಷಗಳ ಚಟುವಟಿಕೆಗಳನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂಬ ಆರೋಪಗಳ ನಡುವೆ ಬಾಂಗ್ಲಾದೇಶದಲ್ಲಿ ಭಾರೀ ಭದ್ರತೆ ಯೊಂದಿಗೆ ಸಾರ್ವತ್ರಿಕ ಚುನಾವಣೆ ನಡೆದಿದೆ. ಇದೇ ವೇಳೆ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ 10 ಮಂದಿ ಹತರಾಗಿ, ಅನೇಕರು ಗಾಯಗೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಯಿತು. ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಮತದಾರರು ಮತಗಟ್ಟೆಗಳ ಬಳಿ ಸಾಲುಗಟ್ಟಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. 300 ಸದಸ್ಯ ಬಲದ ಬಾಂಗ್ಲಾ ಸಂಸತ್‍ಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯು ತ್ತಿರುವ ಚುನಾವಣೆಗಾಗಿ 40,183 ಮತ ಗಟ್ಟೆಗಳನ್ನು ತೆರೆಯಲಾಗಿದೆ. 1,848 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಆಡಳಿತರೂಢ ಅವಾಮಿ ಲೀಗ್ ಮತ್ತು ವಿರೋಧಪಕ್ಷ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ(ಬಿಎನ್‍ಪಿ) ತೀವ್ರ ಪೈಪೋಟಿ  ಇದೆ. ಪ್ರಧಾನಮಂತ್ರಿ ಶೇಖ್ ಹಸೀನಾ ರಾಜಧಾನಿ ಡಾಕಾ ನಗರದ ಕಾಲೇಜ್ ಸೆಂಟರ್‍ನಲ್ಲಿ ಬೆಳಗ್ಗೆ ಮತ ಚಲಾಯಿಸಿದರು. ಅವರ ಹತ್ತಿರದ ಸಂಬಂಧಿ, ವಕೀಲ ಫಝಲ್ ನೂರ್ ತಪೋಸ್ ಈ ಕ್ಷೇತ್ರದಲ್ಲಿ ಅವಾಮಿ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಮತದಾನದ ನಂತರ ಮಾತನಾಡಿದ ಹಸೀನಾ, ಮತದಾರರು ಅವಾಮಿ ಲೀಗ್ ಮತಗಳನ್ನು ಹಾಕಿ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಸೀನಾ ನಾಲ್ಕನೇ ಬಾರಿ ಪ್ರಧಾನ ಮಂತ್ರಿಯಾಗಿ ಪುನರಾಯ್ಕೆ ಬಯಸಿದ್ದರೆ, ಅವರ ಪ್ರತಿಸ್ಫರ್ಧಿ ಹಾಗೂ ಭಾಗಶ: ಪಾಶ್ರ್ವವಾಯುವಿಗೆ ಒಳಗಾಗಿರುವ ಮಾಜಿ ಪ್ರಧಾನಿ ಖಾಲಿದಾ ಜಿಯಾ ಭ್ರಷ್ಟಾಚಾರ ಅಪಾದನೆಗಾಗಿ ಢಾಕಾ ಜೈಲಿನಲ್ಲಿದ್ದಾರೆ. ಅವರ ರಾಜಕೀಯ ಭವಿಷ್ಯ ಅನಿಶ್ಚಿತವಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ 10.41 ಕೋಟಿ ಜನರು ಮತದಾನದ ಹಕ್ಕು ಹೊಂದಿದ್ದಾರೆ. ದೇಶಾದ್ಯಂತ ಶಾಂತಿಯುತ ಮತದಾನಕ್ಕಾಗಿ ಆರು ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದು, ಅವಾಮಿ ಲೀಗ್‍ನ ಯುವ ಘಟಕದ ನಾಯಕರೊಬ್ಬರು ಸೇರಿದಂತೆ ಐವರು ಹತರಾಗಿ ಅನೇಕರು ಗಾಯಗೊಂಡ ಘಟನೆಯೂ ನಡೆದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا