Urdu   /   English   /   Nawayathi

ಬಾಂಗ್ಲಾದೇಶ : ಚುನಾವಣಾ ಘರ್ಷಣೆಯಲ್ಲಿ ಜುಬೋ ಲೀಗ್ ನಾಯಕನ ಹತ್ಯೆ

share with us

ಢಾಕಾ: 30 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಬಾಂಗ್ಲಾದೇಶದಲ್ಲಿ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಾಂಗ್ಲಾದ ರಂಗಮತಿಯಲ್ಲಿನ ಕೌಖಾಲಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆಯಲ್ಲಿ ಜುಬೊ ಲೀಗ್ ರಾಜಕೀಯ ಪಕ್ಷದ ನಾಯಕರೊಬ್ಬರು ಹತರಾಗಿದ್ದು, 10ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಆಡಳಿತರೂಢ ಅವಾಮಿ ಲೀಗ್ ಮತ್ತು ವಿರೋಧಪಕ್ಷ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ(ಬಿಎನ್‍ಪಿ)ಬೆಂಬಲಿಗರ ನಡುವೆ ಇಂದು ಮುಂಜಾನೆ 6.30ರಲ್ಲಿ ಮಾರಾಮಾರಿ ನಡೆಯಿತು.

ಈ ಹಿಂಸಾಚಾರದಲ್ಲಿ ಅವಾಮಿ ಲೀಗ್‍ನ ಯುವ ಘಟಕವಾದ ಜುಬೋ ಲೀಗ್‍ನ ಪ್ರಧಾನ ಕಾರ್ಯದರ್ಶಿ ಮಹಮದ್ ಬಷೀರ್ ಹತರಾದರು. ಈ ಘರ್ಷಣೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದು ಕೆಲವರ ಸ್ಥಿತಿ ಶೋಚನೀಯವಾಗಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا