Urdu   /   English   /   Nawayathi

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪ್ರಗತಿಯಲ್ಲಿ, ಮೊಬೈಲ್ ಇಂಟರ್ ನೆಟ್ ಸ್ಥಗಿತ

share with us

ಢಾಕಾ: 30 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ನೆರೆಯ ಬಾಂಗ್ಲಾದೇಶದಲ್ಲಿ 11ನೇ ಸಂಸತ್ ಚುನಾವಣೆ ಪ್ರಗತಿಯಲ್ಲಿದ್ದು, 104. 2 ಮಿಲಿಯನ್ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೂ ಮುಂದುವರೆಯಲಿದೆ. ಬಾಂಗ್ಲಾದೇಶದ 10 ನೇ ಪ್ರಧಾನಮಂತ್ರಿ ಶೇಖ್ ಹಸೀನಾ ಢಾಕಾದಲ್ಲಿನ  ಸಿಟಿ ಕಾಲೇಜಿನಲ್ಲಿ  ಮತ ಚಲಾಯಿಸಿದ್ದಾರೆ. ಆದಾಗ್ಯೂ, ದುಷ್ಕರ್ಮಿಗಳು ಮತದಾನಕ್ಕಾಗಿ ವ್ಯವಸ್ಥೆ ಮಾಡಿದ್ದ ಎಲ್ಲಾ ಸಾದನ ಸಲಕರಣೆಗಳನ್ನು ಕೊಂಡೊಯ್ಯಿದ್ದರಿಂದ  ನೌಕಾಲಿ-3ರ ಮತಕೇಂದ್ರದಲ್ಲಿ  ಮತದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಮತದಾನದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ  ದೇಶಾದ್ಯಂತ ಮೊಬೈಲ್  ಇಂಟರ್ ನೆಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ  ಸ್ಥಗಿತಗೊಳಿಸಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಮತ್ತೆ ಇಂಟರ್ ನೆಟ್  ವ್ಯವಸ್ಥೆಯನ್ನು  ಒದಗಿಸಲಾಗುವುದು ಸರ್ಕಾರ ಹೇಳಿದೆ. ಸರ್ಕಾರದ ಈ ನಿರ್ಧಾರ ಸುಮಾರು 8.60 ಕೋಟಿ ಜನರ ಮೇಲೆ ಪರಿಣಾಮ ಬೀರಿದೆ.

 ಮತ್ತೊಂದೆಡೆ ನಾಷಿನಲ್ ಯುನಿಟಿ ಫ್ರಂಟ್  ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದ ನಾಲ್ವರನ್ನು  ಆಡಳಿತಾರೂಢ ಪಕ್ಷದ ಬೆಂಬಲಿಗರು ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ  ಜೆನೈದ್ಹಾದ ಮೂರು ಕ್ಷೇತ್ರಗಳಲ್ಲಿ ಚುನಾವಣೆಯನ್ನು ಚುನಾಣಾ ಆಯೋಗ ಮುಂದೂಡಿದೆ.  ಇದೇ ಮೊದಲ ಬಾರಿಗೆ ಆರು ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. 299 ಕ್ಷೇತ್ರಗಳಲ್ಲಿ 40, 183 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2, 07, 312 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ.  ಈ ಪೈಕಿ 25,827 ಮತಕೇಂದ್ರಗಳಲ್ಲಿ ಜನವರಿ 2 ರವರೆಗೂ ಹೆಚ್ಚುವರಿ ಬಿಗಿ ಭದ್ರತೆ  ಒದಗಿಸಲಾಗಿದೆ. ಹಾಲಿ ಪ್ರಧಾನಿ ಶೇಕ್ ಹಸೀನಾ ಮೂರನೇ ಅವಧಿಗೆ  ಗೆಲುವು ಕಾಣುವ ಹಂಬಲ ಹೊಂದಿದ್ದು, ಆಡಳಿತಾರೂಢಾ ಬಾಂಗ್ಲಾದೇಶ ಅವಾಮಿ ಲೀಗ್  ನೇತೃತ್ವದಲ್ಲಿ ಮಹಾಮೈತ್ರಿ ಮಾಡಿಕೊಳ್ಳಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا