Urdu   /   English   /   Nawayathi

ನಾಥೂಲಾದಲ್ಲಿ ಭಾರೀ ಹಿಮಪಾತ; ಸೈನಿಕರಿಂದ 2,500 ಪ್ರವಾಸಿಗರ ರಕ್ಷಣೆ

share with us

ನವದೆಹಲಿ: 29 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಭಾರೀ ಹಿಮಪಾತದಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದು, ಭಾರತೀಯ ಸೇನಾಪಡೆ ಸುಮಾರು 2,500ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಸಿಕ್ಕಿಂನ ಗ್ಯಾಂಗ್ಟಕ್ ಸಮೀಪದ ನಾಥೂಲಾದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಬರೋಬ್ಬರಿ 400ಕ್ಕೂ ಅಧಿಕ ವಾಹನಗಳು ಸಿಲುಕಿಕೊಂಡಿದ್ದವು.

ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಬಳಿಕ ಅವರನ್ನು ಶುಕ್ರವಾರ ರಾತ್ರಿ ಊಟೋಪಚಾರ, ಔಷಧೋಪಚಾರ ಹಾಗೂ ತಾತ್ಕಾಲಿಕ ಶಿಬಿರದ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ವರದಿ ವಿವರಿಸಿದೆ. ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಆರ್ಮಿ, ಭಾರೀ ಹಿಮಪಾತದಲ್ಲಿ ಸಿಲುಕಿದ್ದ 400 ವಾಹನಗಳಲ್ಲಿದ್ದ 2,500ಕ್ಕೂ ಹೆಚ್ಚು ಜನರನ್ನು ನಾಥೂಲಾದಲ್ಲಿ ರಕ್ಷಿಸಲಾಗಿದೆ ಎಂದು ತಿಳಿಸಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا