Urdu   /   English   /   Nawayathi

ಕರಾವಳಿಯಲ್ಲಿ ಹೊರರಾಜ್ಯದ ದರೋಡೆಕೋರರ ತಂಡ. ಪೋಲೀಸರಿಂದ ಹೈ ಅಲರ್ಟ್

share with us

ಮಂಗಳೂರು: 27 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಉಳ್ಳಾಲ ಮತ್ತು ಕೊಣಾಜೆಯಲ್ಲಿ ಪೋಲೀಸರು ಧ್ವನಿವರ್ಧಕವನ್ನು ಬಳಸಿ ಸಾರ್ವಜನಿಕರಲ್ಲಿ ದರೋಡೆಕೋರರ ಬಗ್ಗೆ ಜಾಗೃತಿ ಮೂಡಿಸಿದರು. ಹೊರರಾಜ್ಯದಿಂದ ದಕ್ಷಿಣ ಕನ್ನಡಕ್ಕೆ ದರೋಡೆಕೋರರ ತಂಡವೊಂದು ಬಂದಿರುವ ಹಿನ್ನೆಲೆಯಲ್ಲಿ ಪೋಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ ಎನ್ನಲಾಗಿದೆ. ಐದು ದರೋಡೆಕೋರರ ತಂಡದಿಂದ ಈಗಾಗಲೇ ಉಡುಪಿಯಲ್ಲಿ ದರೋಡೆ ನಡೆದಿದ್ದು, ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಹೇಳಿದ್ದಾರೆ. ದರೋಡೆಕೋರರು ತಾವು ಪೋಲೀಸರು ಎಂದು ಸುಳ್ಳು ಹೇಳಿ ನಿರ್ಜನ ಪ್ರದೇಶಗಳ ರಸ್ತೆಯಲ್ಲಿ ಹೋಗುವವರನ್ನು ತಡೆದು ಮುಂದೆ ಕೊಲೆಯಾಗಿದೆ ಅಥವಾ ಗಲಾಟೆ ನಡೆಯುತ್ತಿದೆ ಆದ ಕಾರಣ ಮಹಿಳೆಯರಿಗೆ ತಮ್ಮ ಚಿನ್ನಾಭರಣಗಳನ್ನು ತೆಗೆದುಕೊಡಿ ಎಂದು ವಂಚಿಸುತ್ತಿದ್ದಾರೆ ಎಂದು ಪೋಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا