Urdu   /   English   /   Nawayathi

ಉಡುಪಿಗೆ ಬಂದದ್ದು ನನ್ನ ಸೌಭಾಗ್ಯ: ರಾಷ್ಟ್ರಪತಿ ರಾಮ​ನಾಥ್​ ಕೋವಿಂದ್​​​​

share with us

ಉಡುಪಿ: 27 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಪೇಜಾವರ ಮಠದ ವಿಶ್ವೇಶ ತೀರ್ಥರ ಗುರುವಂದನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಷ್ಟ್ರಪತಿ ರಾಮ​ನಾಥ್ ಕೋವಿಂದ್, ಉಡುಪಿಗೆ ಬಂದದ್ದು ನನ್ನ ಸೌಭಾಗ್ಯ ಎಂದರು. ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ 80 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣನ ಅಂಗಳದಲ್ಲಿ ಯತಿಶ್ರೇಷ್ಠ ಪೇಜಾವರ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಪ್ರಥಮ ಪ್ರಜೆ ಇವತ್ತು ಕೃಷ್ಣನ ನಗರಿಗೆ ಆಗಮಿಸಿದ್ದರು. ಬೆಳಗ್ಗೆ ಹನ್ನೊಂದೂವರೆ ಸುಮಾರಿಗೆ ಪೇಜಾವರ ಮಠಕ್ಕೆ ಆಗಮಿಸಿದ ರಾಷ್ಟ್ರಪತಿಗಳು, ಸ್ವಾಮೀಜಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ಮಠದ ವತಿಯಿಂದಲೂ ರಾಷ್ಟ್ರಪತಿಗಳಿಗೆ ಯಕ್ಷ ಕಿರೀಟ ತೊಡಿಸಿ ಸನ್ಮಾನ ಮಾಡಲಾಯಿತು.

ರಾಜ್ಯಪಾಲ ವಜೂಭಾಯ್​ ವಾಲಾ ಮತ್ತು ಉಡುಪಿ ಮೂಲದ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಹಾಗೂ ಸ್ವಾಮೀಜಿಗಳು ಪ್ರಥಮ ಪ್ರಜೆಯನ್ನು ಬರ ಮಾಡಿಕೊಂಡರು. ಗುರುವಂದನೆ ಕಾರ್ಯಕ್ರಮದ ಬಳಿಕ ಶ್ರೀಕೃಷ್ಣನ ದರ್ಶನ ಪಡೆದು ಮಾತನಾಡಿದ ರಾಷ್ಟ್ರಪತಿಗಳು, ಉಡುಪಿಗೆ ಬಂದದ್ದು ನನ್ನ ಸೌಭಾಗ್ಯ. ಶ್ರೀರಾಮ ದೇಶದ ಮರ್ಯಾದಾ ಪುರುಷೋತ್ತಮ. ರಾಮನ ಜೀವನ ಆದರ್ಶ ನಮಗೆಲ್ಲ ಮಾದರಿ. ರಾಮ ರಾಜ್ಯವೇ ಆದರ್ಶ. ರಾಮನ ಆದರ್ಶ ಪಾಲಿಸಿದರೆ ದೇಶ ಸುಖಿಯಾಗಿರುತ್ತದೆ. ವಿಶ್ವಕ್ಕೂ ರಾಮನ ಆದರ್ಶ ಮಾದರಿಯಾಗಬೇಕು. ಭೇದ ಭಾವ ಬಿಟ್ಟು ಎಲ್ಲರೂ ಸಹಬಾಳ್ವೆಯಿಂದ ಬದುಕೋಣ. ದೇಶದಲ್ಲಿ ಸಹನೆ, ಕರುಣೆಯ ಬಾಳ್ವೆಗಾಗಿ ಕೃಷ್ಣನಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಗುರುವಂದನೆ ಕಾರ್ಯಕ್ರಮ ಆಯೋಜಿಸಿದ್ದ ಪೇಜಾವರ ಶ್ರೀಗಳ ನೆಚ್ಚಿನ ಶಿಷ್ಯೆ ಹಾಗೂ ಕೇಂದ್ರ ಸಚಿವೆ ಸಾದ್ವಿ ಉಮಾ ಭಾರತಿ ಇವತ್ತಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕೆಲ ಹೊತ್ತು ಪೇಜಾವರ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ ರಾಷ್ಟ್ರಪತಿಗಳು, ಅಷ್ಠಮಠಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಷ್ಟ್ರಪತಿ ಆಗಮನದಿಂದ ಸಂತೋಷವಾಗಿದೆ. ಪಾಜಕದಲ್ಲಿ ಮಧ್ವ ಯುನಿವರ್ಸಿಟಿ ಸ್ಥಾಪನೆಗೆ ಸಹಕಾರ ಮತ್ತು ಮಧ್ವ ದಿನಾಚರಣೆ ಪ್ರಾರಂಭಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ. ಗೋವಿಂದನ ಬಳಿ ಕೋವಿಂದ ಬಂದಿದ್ದಾರೆ. ಅವರಿಗೆ ಶ್ರೇಯಸ್ಸಾಗಲಿ ಅಂತ ಪೇಜಾವರ ಶ್ರೀಗಳು ಶುಭ ಹಾರೈಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا